ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲೋಕಸಬಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಇದ್ದರು.
- ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಕಾರ್ಯಕ್ರಮ
- ವಿವಿಧೆಡೆಯಿಂದ 25 ಸಾವಿರ ಮಂದಿ ಸೇರುವ ನಿರೀಕ್ಷೆ
- ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾಹಿತಿ
ಶಿವಮೊಗ್ಗ: ಈ ಬಾರಿಯ ಭಗವದ್ಗೀತೆ (bhagavdgeete)ಅಭಿಯಾನ ಹಿಂದಿನ ವರ್ಷ ಗಳ ಅಭಿಯಾನದ ಎಲ್ಲ ದಾಖಲೆಗಳನ್ನು ಮೀರಿ ಯಶಸ್ಸು ಕಂಡಿದೆ. ರಾಜ್ಯವ್ಯಾಪಿ ಅಭಿಯಾನ ನಡೆದರೂ ಶಿವಮೊಗ್ಗ (Shivamogga)ಕೇಂದ್ರವಾಗಿರುವುದರಿಂದ ಇಲ್ಲಿ ಹೆಚ್ಚು ಚಟುವಟಿಕೆಗಳು ನಡೆದಿವೆ. ನ.30ರಂದು ರಾಜ್ಯ ಮಟ್ಟ(state level)ದ ಮಹಾಸರ್ಪಣೆಗೆ ಶಿವಮೊಗ್ಗ ಸಜ್ಜಾಗಿದೆ. ಸುಮಾರು 25 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಗೀತೆಯ 11ನೇ ಅಧ್ಯಾಯ ಆಯ್ಕೆಮಾಡಿ, ಶಾಲಾ ಕಾಲೇಜು, ದೇವಸ್ಥಾನ, (temple) ಸಂಘ ಸಂಸ್ಥೆಗಳಲ್ಲಿ ಇದರ ಪಠಣ, ಇದಕ್ಕೆ ಸಂಬಂಧಿಸಿದ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ 280ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶ್ಲೋಕಪಠಣ ನಡೆದಿದ್ದು, ಸುಮಾರು 16 ಸಾವಿರ ಮಕ್ಕಳು (childrens)ಮತ್ತು 5,200 ಮಂದಿ ಸಾರ್ವಜನಿಕರನ್ನು ತಲುಪಲು ಪ್ರಯತ್ನಿಸಲಾಯಿತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೇರೆ ಬೇರೆ ಜಿಲ್ಲೆಗಳಲ್ಲಿ 1,500ಕ್ಕೂ ಹೆಚ್ಚು ಶ್ಲೋಕ ಪಠಣಗಳಾಗಿವೆ. 300ಕ್ಕೂ ಹೆಚ್ಚು ಉಪನ್ಯಾಸಗಳಾಗಿವೆ. 60 ಸಾವಿರಕ್ಕೂ ಅಧಿಕ ಜನರನ್ನು ತಲುಪುವಲ್ಲಿ ಅಭಿಯಾನ ಯಶಸ್ವಿಯಾಗಿದೆ. ನ.30ರ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಹಾಗೂ ಸಾರ್ವಜನಿಕರು ನಗರದ ವಿವಿಧ ಭಾಗಗಳಿಂದ ಫ್ರೀಡಂ ಪಾರ್ಕ್(freedom park)ಗೆ ಆಗಮಿಸಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಂದು ಸಾರ್ವಜನಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಅಭಿಯಾನದ ಮಹಾಪೋಷಕ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಅಭಿಯಾನದ ಪದಾಧಿಕಾರಿಗಳು, ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಧರ್ಮ ಪತಾಕೆ ಹಾರಿಸಿದ ಸಂದರ್ಭದಲ್ಲೇ ಶಿವಮೊಗ್ಗದಲ್ಲಿ ಭಗವದ್ಗೀತಾ ಅಭಿಯಾನದ ರಾಜ್ಯ ಮಟ್ಟದ ಮಹಾ ಸಮರ್ಪಣೆ ನಡೆಯುತ್ತಿರುವುದು ಜನರ ಸೌಭಾಗ್ಯ. ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಗೀತೆಯ ಮಹತ್ವವನ್ನು ಸಾರಬೇಕು.
ಜನರು ಧಾರ್ಮಿಕ ಭಾವನೆಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಭಗವದ್ಗೀತೆ ಅಭಿಯಾನ ಮಹತ್ವ ಪಡೆದುಕೊಂಡಿದೆ. ಸ್ವರ್ಣವಲ್ಲಿ ಶ್ರೀಗಳ ಆಶಯ ಈಡೇರಿಸಲು ಎಲ್ಲರೂ ಮಹಾಸರ್ಪಣೆಯಲ್ಲಿ ಪಾಲ್ಗೊಳ್ಳಬೇಕು. ವಿಶೇಷವಾಗಿ ಮಕ್ಕಳಿಗೆ ಗೀತೆಯ ಬಗ್ಗೆ ಆಸಕ್ತಿ ಮೂಡಿಸಬೇಕು.