ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಯಿಂದ ಏರ್ಪಡಿಸಿರುವ ಹವಾಮಾನ ಬದಲಾವಣೆ ಕುರಿತ ಕಾರ್ಯಾಗಾರದಲ್ಲಿ ವಿವಿಧ ಸಂಶೋಧನಾ ಕೈಪಿಡಿಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಡಾ. ಆರ್.ಸಿ.ಜಗದೀಶ, ಡಾ. ಎಸ್.ವಿ.ಸುರೇಶ್, ಡಾ. ಪಿ.ಚಂದ್ರಶೇಖರ, ಡಾ. ಸುರೇಶ್ ಚಂದ್ರ ಬಾಬು, ಡಾ. ಲೂಸಿ ಬುಷಿ ಇದ್ದರು. 
ಶಿವಮೊಗ್ಗ

ಪ್ರಾಯೋಗಿಕ ಸಂಶೋಧನೆ ಉಪಯುಕ್ತ I practical reaserch

ಅರವಿಂದ ಅಕ್ಲಾಪುರ

ಪ್ರಮುಖ ಮುಖ್ಯಾಂಶಗಳು

  • ಪದೋನ್ನತಿ ಪಡೆಯಲು ಪ್ರಬಂಧ ಮಂಡನೆಯಿಂದ ಉಪಯೋಗವಿಲ್ಲ
  • ಹವಾಮಾನ ಬದಲಾವಣೆಯಿಂದ ಕೃಷಿಗೆ ವ್ಯಾಪಕ ನಷ್ಟ
  • ಕೃಷಿ ನೀತಿ ರೂಪಿಸುವ ಮುನ್ನ ಅಧ್ಯಯನ ಅವಶ್ಯ:
ಶಿವಮೊಗ್ಗ: ಹವಾಮಾನ ಬದಲಾವಣೆ (change) ಯಿಂದ ದೊಡ್ಡ ಆಪತ್ತಿಗೆ ಸಿಲುಕಿರುವುದು ಕೃಷಿ (agriculture) ಕ್ಷೇತ್ರ. ಹೀಗಾಗಿ ಕೃಷಿ ಕ್ಷೇತ್ರದ ಕುರಿತು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನೀತಿ ರೂಪಿಸುವುದು ಸರಿಯಲ್ಲ ಎಂದು ಅಮೆರಿಕ (america) ದ ಐಎಫ್‌ಪಿಆರ್‌ಐ ವಿಜ್ಞಾನಿ ಡಾ. ಸುರೇಶಚಂದ್ರ ಬಾಬು ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಯಿಂದ ಏರ್ಪಡಿಸಿರುವ ಹವಾಮಾನ ಸ್ಥಿತಿಸ್ಥಾಪಕತ್ವ ಕೃಷಿ ಸಂಶೋಧನೆ ಮತ್ತು ಸಹಯೋಗ ಕುರಿತ ಐದು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಸೋಮವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಶೋಧಕರು ಕೃಷಿ ಕಾರ್ಯಕ್ಷೇತ್ರಕ್ಕೆ ಇಳಿದು ಸ್ವತಃ ರೈತರೊಂದಿಗೆ ಕೆಲಸ ಮಾಡಿ ಅವರ ಅನುಭವ ಪಡೆದಾಗ ಸಂಶೋಧನೆಗೆ ಶಕ್ತಿ ಸಿಗುತ್ತದೆ. ಯಾವುದೇ ಸಂಶೋಧನೆ ಎಷ್ಟು ಹೆಚ್ಚಿನ ಜನರಿಗೆ ಉಪಯೋಗವಾಗಿದೆ. ಅದರಿಂದ ಎಷ್ಟು ಜನರ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂಬುದರ ಆಧಾರದಲ್ಲಿ ಸಂಶೋಧನೆಯ ಯಶಸ್ಸನ್ನು ಗುರುತಿಸಬಹುದು. ವೃತ್ತಿಯಲ್ಲಿ ಪದೋನ್ನತಿ ಪಡೆಯುವ ಸಲುವಾಗಿ ಸಾಲು ಸಾಲು ಸಂಶೋಧನಾ ಪ್ರಬಂಧ ಮಂಡಿಸುವುದರಿಂದ ಸಮಾಜಕ್ಕೆ ಉಪಯೋಗವಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಂಶೋಧಕರ ಅನುಭವದಿಂದ ಯುವ ಸಂಶೋಧಕರನ್ನು ಉತ್ತೇಜಿಸಬೇಕು. ಹವಾಮಾನ ಸ್ಥಿತಿಸ್ಥಾಪಕತ್ವ ಸಾಧಿಸಲು ಸಂಶೋಧನೆ ಅತಿ ಮುಖ್ಯ. ಹಸಿರು ಕ್ರಾಂತಿಯ ಪಿತಾಮಹ ಅಮೆರಿಕದ ಅಗ್ರೊನೊಮಿಸ್ಟ್ ನಾರ್ಮನ್ ಬೊರ್ಲಾಗ್ ಅವರು ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ವ್ಯಾಪಕ ಕೊಡುಗೆ ನೀಡಿದ್ದಾರೆ. ಹಲವರು ಕೃಷಿ ಸಂಶೋಧನೆಯಲ್ಲಿ ತೊಡಗಲು ಅವರು ಪ್ರೇರೇಪಿಸಿದ್ದರು ಎಂದು ಸ್ಮರಿಸಿದರು.
ಶಿವಪ್ಪನಾಯಕ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ, ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ. ಎಚ್.ಎಂ.ವಿನಯ್‌ಕುಮಾರ್, ಯುಕೆ ಗ್ರೀನ್‌ವಿಚ್ ವಿವಿಯ ಡಾ. ಲೂಸಿ ಬುಷಿ ಇತರರಿದ್ದರು.
ಯುಕೆ ನ್ಯಾಚುರಲ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್, ಐಎಸ್‌ಪಿಎಫ್-ಬ್ರಿಟಿಷ್ ಕೌನ್ಸಿಲ್, ನವದೆಹಲಿಯ ಐಸಿಎಸ್‌ಎಸ್‌ಆರ್ ಸಹಯೋಗದಲ್ಲಿ ಜ.9ರವರೆಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಸಂಶೋಧನಾ ಕೈಪಿಡಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಕೃಷಿಸ್ನೇಹಿ ಸಂಶೋಧನೆಗೆ ಮನ್ನಣೆ

ಹವಾಮಾನ ಬದಲಾವಣೆಯಿಂದ ಕೃಷಿಕರು ಒಂದೆಡೆ ಬಲಿಪಶುಗಳಾಗುತ್ತಿದ್ದರೆ ಇನ್ನೊಂದೆಡೆ ಕೃಷಿಯಿಂದಲೂ ಹವಾಮಾನ ಬದಲಾವಣೆ ಆಗುತ್ತಿದೆ. ಹಾಗಾಗಿ ಕೃಷಿಸ್ನೇಹಿ ಸಂಶೋಧನೆಗಳು, ಸಂಶೋಧಕರನ್ನು ಉತ್ತೇಜಿಸಬೇಕು ಎಂದು ಬೆಂಗಳೂರು ಯುಎಎಸ್ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಹೇಳಿದರು. ಮಳೆ, ಉಷ್ಣತೆ ವೈಪರೀತ್ಯ ತಡೆಯುವ ತಳಿಗಳ ಅಭಿವೃದ್ಧಿ ಆಗಬೇಕು. ರೈತರಿಗಾಗುವ ನಷ್ಟವನ್ನು ಸ್ಮಾರ್ಟ್ ತಂತ್ರಜ್ಞಾನದಿಂದ ಕಡಿಮೆಗೊಳಿಸುವುದು, ಹವಾಮಾನ ವೈಪರೀತ್ಯ ಎದುರಿಸಲು ವ್ಯವಸ್ಥಿತ ವಿಧಾನ ಅಳವಡಿಸಿಕೊಳ್ಳುವ ಜತೆಗೆ ಅದರ ನಿರ್ವಹಣೆಯೂ ಮುಖ್ಯವಾಗಿದೆ. ಸ್ಪರ್ಧಾತ್ಮಕ ಸಂಶೋಧನೆಗಿಂತ ಸಹಕಾರಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.
"

ಭಾರತದ ಹಸಿರು ಕ್ರಾಂತಿಯ ಯಶಸ್ಸಿಗೆ ಕಾರಣವಾಗಿದ್ದು ಮೂರು ‘ಎಸ್’ಗಳು. ಕೃಷಿ ವಿಜ್ಞಾನಿ ಸ್ವಾಮಿನಾಥನ್, ಅಂದಿನ ಕೃಷಿ ಸಚಿವ ಸುಬ್ರಹ್ಮಣ್ಯಂ ಹಾಗೂ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಐಎಎಸ್ ಅಧಿಕಾರಿ ಶಿವರಾಮ್. ಈ ಮೂವರ ಬದ್ಧತೆಯಿಂದ ಭಾರತ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿತು.