ಜೋಗ ಶಾಖಾ ವ್ಯಾಪ್ತಿಯಲ್ಲಿ 11 ಕೆವಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದಿರುವುದನ್ನು ತೆರವು ಮಾಡುತ್ತಿರುವ ಮೆಸ್ಕಾಂ ಸಿಬ್ಬಂದಿ. 
ಶಿವಮೊಗ್ಗ

ಕಾರ್ಗಲ್‌ನಲ್ಲಿ ವಿದ್ಯುತ್ ವ್ಯತ್ಯಯ | rain damage

ಶಿವಕುಮಾರ ಎಸ್.ಪಿ.
ಕಾರ್ಗಲ್: ಶರಾವತಿ ಕಣಿವೆ ಪ್ರದೇಶದಲ್ಲಿ ರಭಸವಾದ ಗಾಳಿ ಹಾಗೂ ಧಾರಾಕಾರ ಮಳೆ ಮಂಗಳವಾರವೂ ಮುಂದುವರಿದಿದೆ. ಸಾಲು ಸಾಲು ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದು ಹಲವು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.
ಸೋಮವಾರ ರಾತ್ರಿಯಿಂದ ವಿದ್ಯುತ್ ಕೈಕೊಟ್ಟಿರುವುದರಿಂದ ಕುಡಿಯುವ ನೀರು ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಮೊಬೈಲ್ ಫೋನ್ ಚಾರ್ಜ್ ಮಾಡಲಾಗುತ್ತಿಲ್ಲ. ಇಂಟರ್ನೆಟ್ ವ್ಯವಸ್ಥೆ ಕೈಕೊಟ್ಟಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮಂಗಳವಾರ ಮಧ್ಯಾಹ್ನದ ವೇಳೆಗೆ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬ್ಯಾಟರಿ ಚಾಲಿತ ಯುಪಿಎಸ್ ಆ್ ಆದ ಕಾರಣ ಕಂಪ್ಯೂಟರ್‌ಗಳು ಆ್ ಆಗಿ ಸೇವೆ ಸ್ಥಗಿತಗೊಂಡಿದೆ.
ಸೋಮವಾರ ರಾತ್ರಿ ಜೋಗ ಶಾಖಾ ವ್ಯಾಪ್ತಿಯಲ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಸಮೀಪ ಸುಮಾರು ಹತ್ತು ಮರಗಳು ಮುರಿದು ವಿದ್ಯುತ್ ಮಾರ್ಗದ ಮೇಲೆ ಬಿದ್ದಿರುವುದರಿಂದ ಫೀಡರ್ ಜತೆ ಮುಖ್ಯ ವಿತರಣಾ ಕೇಂದ್ರದ ಪರಿವರ್ತಕವೂ ಟ್ರಿಪ್ ಆಗಿದೆ. ಹಾಗಾಗಿ ಈ ಮಾರ್ಗದ ಐದು ವಿದ್ಯುತ್ ವಿತರಕಗಳೂ ಸ್ಥಗಿತವಾಗಿದ್ದವು. ಸದರಿ ವಿತರಕಗಳ ಪೈಕಿ ಸಾಗರ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಎ್ ಟೆನ್ ಮಾರ್ಗವನ್ನು ಅತ್ಯಂತ ತುರ್ತಾಗಿ ಸರಿಪಡಿಸಿ ಮಧ್ಯಾಹ್ನದ ಹೊತ್ತಿಗೆ ಚಾಲನೆ ಮಾಡಿ ನೀರು ಪೂರೈಸಲಾಯಿತು. ಜೋಗ ಶಾಖೆಯ ಹೆಚ್ಚಿನ ಮೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಈಗ ಐದು ವಿತರಕಗಳನ್ನು ಚಾಲನೆಗೊಳಿಸಲಾಗಿದೆ ಎಂದು ಜೋಗ ಮೆಸ್ಕಾಂ ಎಇಇ ಪ್ರವೀಣ್ ಮಾಹಿತಿ ನೀಡಿದ್ದಾರೆ.