ಶಿವಮೊಗ್ಗ ಸೈಬರ್ ಠಾಣೆ 
ಶಿವಮೊಗ್ಗ

ಕೋಟ್ಯಂತರ ರೂ. ಸೈಬರ್ ವಂಚನೆ ಜಾಲ ಬಯಲಿಗೆಳೆದ ಪೊಲೀಸರು । Cyber ​​fraud

ಪ್ರಮುಖ ಮುಖ್ಯಾಂಶಗಳು

  • ಕಮೀಷನ್ ಕೊಡುವುದಾಗಿ ಬ್ಯಾಂಕ್ ಖಾತೆ, ಮೊಬೈಲ್ ನಂಬರ್‌ ಪಡೆದಿದ್ದ ವಂಚಕರು
  • ದೇಶಾದ್ಯಂತ 352 ಪ್ರಕರಣ ದಾಖಲು, 82,00,15,712 ರೂ. ಗೂ ಅಧಿಕ ಹಣ ವಂಚನೆ
  • ಸೈಬರ್ ಪೊಲೀಸರಿಂದ ಚಿಕ್ಕಮಗಳೂರಿನ ಮೀನಿನ ವ್ಯಾಪಾರಿ ಸೇರಿ ಮೂವರ ಬಂಧನ
ಶಿವಮೊಗ್ಗ: ಕಮೀಷನ್ ಕೊಡುವುದಾಗಿ ಆಸೆ ತೋರಿಸಿ ಪರಿಚಯಸ್ಥರಿಂದ ಬ್ಯಾಂಕ್ ಖಾತೆಗಳು, ಮೊಬೈಲ್ ನಂಬರ್‌ಗಳು ಒಳಗೊಂಡಂತೆ ದಾಖಲಾತಿ ಪಡೆದು ಕೋಟ್ಯಂತರ ರೂ. ಸೈಬರ್ ವಂಚನೆ( Cyber ​​fraud)ಯ ಜಾಲವನ್ನು  ಬಯಲಿಗೆಳೆದಿರುವ ಶಿವಮೊಗ್ಗ ಸೈಬರ್ ಪೊಲೀಸರು, ಚಿಕ್ಕಮಗಳೂರಿನ ಮೀನಿನ ವ್ಯಾಪಾರಿ(Fishmonger) ಸೇರಿ ಮೂವರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಶರಾವತಿನಗರ ಶಾರದಮ್ಮ ಕಾಂಪೌಂಡ್‌ನ ಆರ್.ಸಿ.ಜಗದೀಶ್(43), ಹೊಸಮನೆ 6ನೇ ಮುಖ್ಯ ರಸ್ತೆ ನಿವಾಸಿ ಟಿ.ಅನಂತ(34) ಮತ್ತು ಚಿಕ್ಕಮಗಳೂರು ಶಂಕರಪುರದ ಅರ್ಷಾದ್ (39) ಬಂಧಿತರು. ಶಿವಮೊಗ್ಗದ ವಿ.ವಿಲ್ಸನ್ ಎಂಬುವರು ಫೆ.9ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ಕೋಟಿ ಕೋಟಿ ರೂ. ವಂಚನೆ ಆಗಿರುವುದನ್ನು ಬಯಲಿಗೇಳಿದ್ದಾರೆ.
ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರ ಮಾಡಿಕೊಂಡಿದ್ದ ಆರ್.ಸಿ.ಜಗದೀಶ್ ಅವರು ವಿಲ್ಸನ್ ಅವರಿಂದ ಬ್ಯಾಂಕ್ ಖಾತೆಗಳನ್ನು ಓಪನ್ ಮಾಡಿ ಕೊಟ್ಟಲ್ಲಿ ಕಮಿಷನ್(Commission) ನೀಡುವುದಾಗಿ ನಂಬಿಸಿದ್ದ. ಶಿವಮೊಗ್ಗದಲ್ಲಿ ಎರಡು ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ವಿಲ್ಸನ್ ಕೂಡ ಸೈಬರ್ ಠಾಣೆ(Cyber ​​​​station)ಗೆ ದೂರು ನೀಡಿದ್ದರು.
ಪ್ರಕರಣದಲ್ಲಿ ಆರೋಪಿ ಪತ್ತೆಗೆ ಸೈಬರ್ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎನ್.ಶೇಖರ್, ಕಿರಣ್‌ಕುಮಾರ್, ಚಂದ್ರಶೇಖರ್, ಗಿರೀಶ ಸ್ವಾಮಿ, ಆಂಡ್ರ್ಯೂಸ್ ಮತ್ತು ಜಿ.ಎನ್.ಗೌತಮ್ ಅವರಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಆರೋಪಿ ಆರ್.ಸಿ.ಜಗದೀಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮೀನಿನ ವ್ಯಾಪಾರಿ ಅರ್ಷಾದ್ ಮತ್ತು ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದ ಟಿ.ಅನಂತ ಸಿಕ್ಕಿಬಿದ್ದಿದ್ದಾರೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿತರ ಪತ್ತೆ ಪೊಲೀಸರು ಕ್ರಮಕೈಗೊಂಡಿದ್ದು, ತನಿಖೆ ಮುಂದುವರಿದಿದೆ.

ಕೋಟಿ ಕೋಟಿ ರೂ. ವಂಚನೆ

ಆರೋಪಿಗಳ ಬಳಿ ವಿವಿಧ ಹೆಸರಿನಲ್ಲಿರುವ 15 ಮ್ಯೂಲ್ ಖಾತೆ(Mule account) ಪತ್ತೆಯಾಗಿದ್ದು, ಈ ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು 352ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಬರೋಬ್ಬರಿ 82,00,15,712 ರೂ. ಗೂ ಅಧಿಕ ಹಣ ವಂಚನೆಯಾಗಿದೆ. ಅಲ್ಲದೆ, ಆರೋಪಿತಗಳು ವಂಚನೆಗೆ ಬಳಸಿದ 15 ಮ್ಯೂಲ್ ಖಾತೆಗಳಲ್ಲಿ 14,71,91,174 ರೂ.ಗೂ ಅಧಿಕ ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿದೆ.

ಏನೆಲ್ಲಾ ಜಪ್ತಿ ?

  • 2 ಮೊಬೈಲ್
  • 11 ಎಟಿಎಂ ಕಾರ್ಡ್
  • 9 ಕ್ಯೂಆರ್ ಕೋಡ್ ಸ್ಕಾೃನರ್
  • 15  ಏರ್‌ಟೈಲ್ ಸಿಮ್,
  •  15 ಮ್ಯೂಲ್ ಬ್ಯಾಂಕ್ ಖಾತೆ