ಕೊಲೆ ಆರೋಪಿ ಕಿಶೋರ್ ಕಾಲಿಗೆ ಗುಂಡು ತಗುಲಿದ್ದನ್ನು ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದ ಎಸ್‌ಪಿ ಬಿ.ನಿಖಿಲ್. ಇನ್‌ಸ್ಪೆಕ್ಟರ್ ಸತ್ಯನಾರಾಯಣ ಇದ್ದರು. 
ಶಿವಮೊಗ್ಗ

ಕೊಲೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು | Murder accused FIRING

ಪ್ರಮುಖ ಮುಖ್ಯಾಂಶಗಳು

  • ಮಿಳಘಟ್ಟದಲ್ಲಿ ಬುಧವಾರ ಸಂಜೆ ನಡೆದಿದ್ದ ವೃದ್ಧೆಯ ಕೊಲೆ
  • ಕಿಶೋರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು
  • ಗುರುವಾರ ಬೆಳಗಿನಜಾವ ವಾಜಪೇಯಿ ಬಡಾವಣೆಯಲ್ಲಿ ಫೈರಿಂಗ್
ಶಿವಮೊಗ್ಗ: ನಗರದ ಮಿಳಘಟ್ಟದ ಆನಂದರಾವ್ ಬಡಾವಣೆಯಲ್ಲಿ ಬುಧವಾರ ಸಂಜೆ ನಡೆದಿದ್ದ ವೃದ್ಧೆಯ ಭೀಕರ ಕೊಲೆ ಆರೋಪಿ(Murder accused) ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಮಿಳಘಟ್ಟದ ನಿವಾಸಿ ಕಿಶೋರ್ (28) ಬಂಧಿತ ಆರೋಪಿ. ಗಾಂಜಾ ವ್ಯಸನ ತ್ಯಜಿಸುವಂತೆ ಹಾಗೂ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರೂ ಮಾತು ಕೇಳದಿದ್ದಾಗ ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿದಾಗ ಅಜ್ಜಿ ಸುಶೀಲಮ್ಮ(65) ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ.
ಗುರುವಾರ ಬೆಳಗಿನಜಾವ ವಾಜಪೇಯಿ ಬಡಾವಣೆ(Vajapeyye badavane)ಯಲ್ಲಿ ಆರೋಪಿಯನ್ನು ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಲು ಯತ್ನಿಸಿದ್ದ. ಈ ವೇಳೆ ದೊಡ್ಡಪೇಟೆ ಸಿಪಿಐ( Doddpet CPI) ಸತ್ಯನಾರಾಯಣ್ ಅವರು ಮೊದಲ ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆಗಲೂ ಮಾತು ಕೇಳಿದಿದ್ದಾಗ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಕಿಶೋರನನ್ನು ಮೆಗ್ಗಾನ್ ಆಸ್ಪತ್ರೆ(Meggan Hospital)ಗೆ ದಾಖಲಿಸಲಾಗಿದೆ. ಆರೋಪಿಯ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಪೇದೆ ಗಣೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಸ್‌ಪಿ ಬಿ.ನಿಖಿಲ್ ಅವರು ಘಟನಾ ಸ್ಥಳ ಮತ್ತು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.