ಕಳೆದ 16 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿ ಮನೆಯನ್ನು ಪತ್ತೆ ಮಾಡಿದ ಸೊರಬ ಪೊಲೀಸರು 
ಶಿವಮೊಗ್ಗ

ಮೃತಪಟ್ಟ ತಿಂಗಳ ಬಳಿಕ ಆರೋಪಿ ಪತ್ತೆ ಮಾಡಿದ ಪೊಲೀಸರು । Arrest warrant

ಶಿವಮೊಗ್ಗ: ಕಳೆದ 16 ವರ್ಷಗಳಿಂದ ನ್ಯಾಯಾಲಯ(Court)ಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಪತ್ತೆ ಮಾಡಿದ್ದಾರೆ. ವಿಪರ್ಯಾಸವೆಂದರೆ ಆತ ಮೃತಪಟ್ಟು ಒಂದು ತಿಂಗಳು ಗತಿಸಿದೆ. !
ಹೌದು, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಚಿಕ್ಮಣಕಟ್ಟಿ ಕಬನೂರು ಗ್ರಾಮದ ಭಾಷಾ ಸಾಬ್ ಅಲಿಯಾಸ್ ನೂರ್ ಭಾಷಾ ಸಾಬ್ ಹರ್ಕುಣಿ (50) ಮೃತ ಆರೋಪಿ. 2010ರಲ್ಲಿ ಪ್ರಕರಣವೊಂದರಲ್ಲಿ ಜೈಲು(Jail) ಸೇರಿದ್ದ ಆತ ಜಾಮೀನಿನ ಮೇಲೆ ಹೊರಬಂದಿದ್ದ. ಆದರೆ ಕಳೆದ 16 ವರ್ಷಗಳಿಂದ ಆತ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ ಆತನ ವಿರುದ್ಧ ಸೊರಬದ ಪಿಸಿಜೆ(PCJ) ಮತ್ತು ಜೆಎಂಎಫ್‌ಸಿ(JMFC) ನ್ಯಾಯಾಲಯದಲ್ಲಿ ಬಂಧನದ ವಾರೆಂಟ್(Arrest warrant) ಜಾರಿಯಾಗಿತ್ತು.
ಶಿಕಾರಿಪುರ ಡಿವೈಎಸ್‌ಪಿ(DYSP) ಕೆ.ಕೇಶವ ಮೇಲ್ವಿಚಾರಣೆಯಲ್ಲಿ, ಶಿಕಾರಿಪುರದ ಸಿಪಿಐ ಮಹಾಂತೇಶ್ ಕೆ ಲಂಬಿ ಮತ್ತು ಸೊರಬ ಸಿಪಿಐ(CPI) ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಸೋಮನಾಯ್ಕ, ಶಶಿಧರ್ ಆರೋಪಿ ಮನೆಯನ್ನು ಪತ್ತೆ ಮಾಡಿದ್ದರು. ಆದರೆ ಆರೋಪಿ ಭಾಷಾ ಸಾಬ್ ಕಳೆದೊಂದು ತಿಂಗಳ ಹಿಂದೆಯೇ ಮೃತಪಟ್ಟಿರುವುದು ತನಿಖೆ ವೇಳೆ ದೃಢಪಟ್ಟಿದೆ. ಹಾಗಾಗಿ ಈ ಪ್ರಕರಣ ಮುಕ್ತಾಯ ಮಾಡುವ ಕುರಿತು ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿ ಕ್ರಮ ಕೈಗೊಂಡಿದ್ದಾರೆ.