ಸೊರಬ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ದಾಸೋಹಿಗಳನ್ನು ಸನ್ಮಾನಿಸಲಾಯಿತು. ಶ್ರೀ ನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ. ಉಮೇಶ್​, ಮಂಜುನಾಥ್​, ರೇಖಾ ಜಗದೀಶ್​ ಇತರರಿದ್ದರು. 
ಶಿವಮೊಗ್ಗ

ವ್ಯಕ್ತಿತ್ವ ವಿಕಸನವೇ ವಚನಗಳ ಆಶಯ

ಸೊರಬ: ಬಸವಾದಿ ಶಿವಶರಣ ಬದುಕು ವಚನಗಳ ಮೂಲಕ ವ್ಯಕ್ತಿತ್ವ ವಿಕಾಸ ಮಾಡುವುದಾಗಿತ್ತು ಎಂದು ಜಡೆ ಹಿರೇಮಠದ ಶ್ರೀ ನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಚಾಮರಾಜಪೇಟೆಯ ಕಾನುಕೇರಿ ಮಠದಲ್ಲಿ ಸದ್ಗುರು ಸೇವಾ ಟ್ರಸ್ಟ್​,ಅಕ್ಕನ ಬಳಗ ಸೇವಾ ಟ್ರಸ್ಟ್​, ಟೌನ್​ ವೀರಶೈವ ಸಮಾಜದಿಂದ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಯ&ಭಕ್ತಿಯಿಂದ ಧರ್ಮದ ಪರಿಪಾಲನೆ ಮಾಡುವುದು ಹಿಂದಿನ ಕಾಲದಲ್ಲಿತ್ತು. ಎಲ್ಲರನ್ನೂ ಪ್ರೀತಿಸುವ ಮೂಲಕ ಬದುಕಿದರೆ ಅದೇ ಸ್ವರ್ಗ. ಆಚಾರವೇ ಸ್ವರ್ಗವಾಗಿದ್ದು, ಅದನ್ನು ಪಾಲಿಸಬೇಕು. ವಾಸ್ತವದಲ್ಲಿ ಬದುಕು ನಡೆಸಲು ಮುಂದಾಗಬೇಕು. ಕಾರಣ ಮನುಷ್ಯ ಲೌಕಿಕ ಜೀವಿ. ಎಲ್ಲ ಬಂಧನಗಳಿಂದ ಮುಕ್ತಿಹೊಂದಲು ಆಚಾರವಿರಬೇಕು. ಬಸವಾದಿ ಚಿಂತನೆಗಳ ರಸಸ್ವಾದವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಡಾ. ಉಮೇಶ್​, ಟೌನ್​ ವೀರಶೈವ ಸಮಾಜದ ಅಧ್ಯಕ್ಷ ಮಂಜುನಾಥ್​, ರೇಖಾ ಜಗದೀಶ್​, ನಿಜಗುಣ ಚಂದ್ರಶೇಖರ್​, ಸುಧಾ ಶಿವಪ್ರಸಾದ್​, ಶಿವಕುಮಾರ ಗೌಡ, ಜಯಮಾಲ ಇತರರಿದ್ದರು.