ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳ ಕೈಬರಹದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಡಾ. ರಜನಿ ಪೈ, ಡಾ. ಕೆ.ಶ್ರೀಧರ್, ಎಚ್.ಎನ್.ಎಸ್.ರಾವ್, ಶ್ರೀಕಾಂತ್ ಹೆಗಡೆ ಇತರರಿದ್ದರು. 
ಶಿವಮೊಗ್ಗ

ಗುರಿ ಸಾಧಿಸಲು ಪರಿಶ್ರಮ ಮುಖ್ಯ

ಹೊಳೆಹೊನ್ನೂರು: ಪ್ರಕೃತಿಯೇ ಮೊದಲ ಶಿಕ್ಷಕ. ಜೀವನದಲ್ಲಿ ನಾವು ಭಾವಿಸಿದಂತೆ ದಾರಿಗಳು ಕಾಣುತ್ತವೆ ಎಂದು ಮಾನಸ ಗ್ರೂಪ್ ಆ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷೆ ಡಾ. ರಜನಿ ಪೈ ಹೇಳಿದರು.
ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಸಿದ್ದರೆ ಮಾರ್ಗ ಎಂಬುದು ಸಾರ್ವಕಾಲಿಕ ಸತ್ಯ. ಪರಿಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ದೇವರೂ ನಮಗೆ ಸ್ಪಂದಿಸುತ್ತಾನೆ. ಮಕ್ಕಳೇ ನಿಮ್ಮಲ್ಲಿರುವ ಶಕ್ತಿ ಅತ್ಯದ್ಭುತವಾದುದು. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮನೋವೈದ್ಯ ಕೆ.ಶ್ರೀಧರ್ ಮಾತನಾಡಿ, ಜ್ಞಾನದ ಹುಡುಕಾಟದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಾನರೇ ಆಗಿದ್ದಾರೆ. ಸವಾಲುಗಳನ್ನು ಎದುರಿಸುವ ಗುಣವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ನಮ್ಮಲ್ಲಿರುವ ಬುದ್ಧಿವಂತಿಕೆಯನ್ನು ನಾವು ಸೂಕ್ತ ಸಮಯದಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಕೈಬರಹದ ಪುಸ್ತಕ ಹಾಗೂ ಇ-ಮ್ಯಾಗಜಿನ್ ಬಿಡುಗಡೆ ಮಾಡಲಾಯಿತು. ಶೈಕ್ಷಣಿಕ ನಿರ್ದೇಶಕ ಎಚ್.ಎನ್.ಎಸ್.ರಾವ್, ಪ್ರಾಚಾರ್ಯ ಶ್ರೀಕಾಂತ್ ಹೆಗಡೆ, ಹಿರಿಯ ಉಪ ಪ್ರಾಚಾರ್ಯೆ ಡಾ. ರೆಜಿ ಜೋಸ್ೆ, ಉಪ ಪ್ರಾಚಾರ್ಯೆ ವಾಣಿ ಕೃಷ್ಣಪ್ರಸಾದ್, ಶಾಲಾ ಸಂಸತ್ ಪ್ರಧಾನಿ ಭುವನ್‌ಕುಮಾರ್,  ಗ್ಲಾನ್ಸಿ ಡಿಸೋಜ, ಲಕ್ಷ್ಮೀ, ಸುಬಿಯಾ, ವಾಣಿ, ವಿನುತಾ ಇತರರಿದ್ದರು.