ಸಾಗರದಲ್ಲಿ ಆಯೋಜಿಸಿದ್ದ ಹೃದಯ ತಪಾಸಣಾ ಶಿಬಿರದಲ್ಲಿ ಎಂ.ನಾಗರಾಜ್, ಮಾಧವ ಭಟ್, ಎಂ.ಡಿ.ಆನಂದ್, ಅಶ್ವಿನಿಕುಮಾರ್, ಮ.ಸ.ನಂಜುಂಡಸ್ವಾಮಿ ಇತರರಿದ್ದರು. 
ಶಿವಮೊಗ್ಗ

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅವಶ್ಯ

ಸಾಗರ: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನ ಅಧ್ಯಕ್ಷ ಎಂ.ನಾಗರಾಜ್ ಹೇಳಿದರು.
ಶಂಕರಮಠ ಸಭಾಂಗಣದಲ್ಲಿ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನ, ಶೃಂಗೇರಿ ಶಂಕರಮಠ, ಅಭಿನಯ ಸಾಗರ ಹಾಗೂ ಚೆನ್ನೈನ ಮಾನ್ವಿತಾ ಹೆಲ್ತ್‌ಕೇರ್ ಸಹಯೋಗದಲ್ಲಿ ಆಯೋಜಿಸಿದ್ದ ಹೃದಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ ಎಂದು ತಿಳಿಸಿದರು.
ಹೃದಯ ತಪಾಸಣೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸಿ ಸ್ಥಳದಲ್ಲೇ ವರದಿಯೊಂದಿಗೆ ವೈದ್ಯರು ಸಲಹೆ ನೀಡಿದರು. 6 ವೈದ್ಯರು, 13 ವೈದ್ಯಕೀಯ ಸಿಬ್ಬಂದಿ, 6 ತಪಾಸಣಾ ಕೌಂಟರ್‌ಗಳಲ್ಲಿ ಕಾರ್ಯನಿರ್ವಹಿಸಿದರು. ಸಿಗಂದೂರೇಶ್ವರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಲ್‌ಬಿ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಶಿಬಿರದಲ್ಲಿ 340 ಜನರು ಹೃದಯ ತಪಾಸಣೆ ಮಾಡಿಸಿಕೊಂಡರು.
ಸಂಯೋಜಕ ಮಾಧವ ಭಟ್, ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಆನಂದ, ಶರಾವತಿ ಸಿ. ರಾವ್, ಮ.ಸ.ನಂಜುಂಡಸ್ವಾಮಿ, ಆರ್.ಶ್ರೀನಿವಾಸ್, ದಿನಕರ, ಜಯಾ ಆರ್.ಪೈ, ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಎನ್.ಲಲಿತಮ್ಮ, ಟಿ.ವಿ.ಪಾಂಡುರಂಗ, ನಾರಾಯಣ ಅರಮನೆಕೇರಿ, ನಾರಾಯಣಮೂರ್ತಿ ಉಪಸ್ಥಿತರಿದ್ದರು.