ಕೆಂಜಗಾಪುರ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಶಾಂತಕುಮಾರ ಗೌಡ, ಶಿವಲಿಂಗಯ್ಯ ಶಾಸ್ತ್ರಿ, ಪ್ರಮೀಳಮ್ಮ ಇತರರಿದ್ದರು. 
ಶಿವಮೊಗ್ಗ

ದೇವರ ಪೂಜೆಯಿಂದ ನೆಮ್ಮದಿ | Special Puja

ಆನಂದಪುರ: ದೇವರು ಕಣ್ಣಿಗೆ ಕಾಣಿಸನು. ಆದರೂ ಎಲ್ಲೆಡೆ ವ್ಯಾಪಿಸಿದ್ದಾನೆ ಎಂದು ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಕೆಂಜಗಾಪುರದ ಶ್ರೀ ವೀರಭದ್ರ ದೇವಾಲಯದಲ್ಲಿ ಆಯೋಜಿಸಿದ್ದ ಶ್ರಾವಣ ವಿಶೇಷ ಪೂಜೆ ಮತ್ತು ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವರಲ್ಲಿನ ನಂಬಿಕೆ ಮತ್ತು ಶ್ರದ್ಧೆ ಧನಾತ್ಮಕ ವಾತಾವರಣ ಸೃಷ್ಟಿಸಿ ನಮ್ಮ ಮನಸ್ಸಿನ ಮೇಲೆ ಉತ್ತಮ ಪ್ರಭಾವ ಬೀರುತ್ತದೆ. ದೇವರ ಪೂಜೆ ಮತ್ತು ದರ್ಶನ ಎರಡೂ ಸಹ ಮಾನಸಿಕ ನೆಮ್ಮದಿ, ಸ್ಥೈರ್ಯ ನೀಡುತ್ತದೆ ಎಂದರು.
ಮಕ್ಕಳಲ್ಲಿ ಶಿಸ್ತು, ಶ್ರದ್ಧೆ ಮತ್ತು ಸಂಸ್ಕೃತಿಯನ್ನು ರೂಢಿಸಿದರೆ ಸಂಸ್ಕಾರವಂತರಾಗುತ್ತಾರೆ. ಈ ದೇಗುಲ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಶಿಥಿಲಾವಸ್ಥೆ ತಲುಪಿದ್ದ ಇದನ್ನು ಭಕ್ತರು ಮತ್ತು ದಾನಿಗಳ ನೆರವಿನಿಂದ ಅದ್ಭುತವಾಗಿ ಜೀರ್ಣೋದ್ಧಾರ ಮಾಡಲಾಗಿದೆ ಎಂದು ಹೇಳಿದರು.
ದೇವಾಲಯ ಸಮಿತಿ ಅಧ್ಯಕ್ಷ ಶಾಂತಕುಮಾರ ಗೌಡ, ಶಿವಲಿಂಗಯ್ಯ ಶಾಸ್ತ್ರಿ, ಕೆ.ಆರ್.ರಾಜು, ಪ್ರಮೀಳಮ್ಮ, ರವಿ ಗೌಡ, ರಾಜಶೇಖರ ಗೌಡ, ಸೋಮಶೇಖರ ಗೌಡ, ಪ್ರಕಾಶ, ಹಾಲಪ್ಪ ಗೌಡ, ಕೇಶವ ಗೌಡ, ವೀರೇಶ ಇತರರಿದ್ದರು.