ಸಾಗರದಲ್ಲಿ ಅಖಿಲ ಭಾರತೀಯ ಕೊಂಕಣಿ ಪರಿಷತ್​ನಿಂದ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ, ಕೊಂಕಣಿ ಭಾಷಿಕರ ಸಮಾವೇಶವನ್ನು ಸಾಹಿತಿ ಶರದ್​ಚಂದ್ರ ಶೆಣೈ ಉದ್ಘಾಟಿಸಿದರು. ಚೇತನ್​ ಆಚಾರ್ಯ, ಮರಿಯಾ ಲೀಮಾ ಇತರರಿದ್ದರು. 
ಶಿವಮೊಗ್ಗ

ಮುಂದಿನ ಪೀಳಿಗೆಗೆ ಕೊಂಕಣಿ ಭಾಷೆ ತಲುಪಿಸಿ

ಸಾಗರ: ಸಾವಿರಾರು ವರ್ಷದ ಇತಿಹಾಸ ಹೊಂದಿರುವ ಕೊಂಕಣಿ ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದು ಸಾಹಿತಿ ಶರದ್​ಚಂದ್ರ ಶೆಣೈ ಹೇಳಿದರು.
ಸಂತ ಜೋಸೆಫರ ಸಮುದಾಯ ಭವನದಲ್ಲಿ ಭಾನುವಾರ ಅಖಿಲ ಭಾರತೀಯ ಕೊಂಕಣಿ ಪರಿಷತ್​ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಹಾಗೂ ಕೊಂಕಣಿ ಭಾಷಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೊಂಕಣಿ ಭಾಷಿಕರು ದೇಶಾದ್ಯಂತ ಬೇರೆ ಬೇರೆ ಭಾಗಗಳಲ್ಲಿದ್ದು, ಸಾಹಿತ್ಯ, ಶಿಣ, ರಂಗಭೂಮಿ, ಸಾಂಸತಿಕ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಟಿಸುವ ಮಹತ್ತರ ಕಾರ್ಯವನ್ನು ಇಂತಹ ಸಮಾವೇಶ ಮಾಡುತ್ತದೆ. ಭಾಷಾ ಬೆಳವಣಿಗೆಗೆ ಇಂತಹ ಸಮಾವೇಶ ಹೆಚ್ಚಿನ ಪ್ರಾಶಸ್ತ ್ಯ ನೀಡುತ್ತವೆ. ಭಾಷೆ ಉಳಿದಾಗ ಮಾತ್ರ ನಾವು ಸಂಸತಿಯನ್ನು ಉಳಿಸಿಕೊಳ್ಳಲು ಸಾಧ್ಯ. ನಮ್ಮ ಭಾಷೆಯನ್ನು ಹೆಮ್ಮೆಯಿಂದ ಉಳಿಸಿ, ಬೆಳೆಸುವ ಕೆಲಸ ಮಾಡೋಣ ಎಂದು ತಿಳಿಸಿದರು.
ಕವಿ ಟಾಯ್ಸನ್​ ನೊರೊನ್ಹಾ ಮಾತನಾಡಿ, ಕೊಂಕಣಿ ಭಾಷೆಗೆ 1,200 ವರ್ಷದ ಇತಿಹಾಸವಿದೆ ಎನ್ನಲಾಗುತ್ತದೆ. ಬೇರೆ ಕಾರಣಗಳಿಂದ ಕೊಂಕಣಿ ಭಾಷೆ ಮಾತನಾಡುವವರು ವಿವಿಧೆಡೆ ನೆಲೆಸಿದ್ದಾರೆ. ಅವರನ್ನು ಸಂಟಿಸಬೇಕು ಎನ್ನುವ ಉದ್ದೇಶದಿಂದ ಕೊಂಕಣಿ ಭಾಷೆ ಮಾತನಾಡುವವರು ಹೆಚ್ಚು ಇರುವ ಪ್ರದೇಶಗಳಲ್ಲಿ ಕೊಂಕಣಿ ಪರಿಷತ್​ ಸಮಾವೇಶ ನಡೆಸಲಾಗುತ್ತಿದೆ. ಭಾಷೆ ನಾಗರಿಕತೆ ಸಂಕೇತ ಆಗಿದ್ದು, ಭಾಷಾ ಬಳಕೆ ಹೆಚ್ಚಿಸಿದಷ್ಟೂ ಅದು ಜನಸಮೂಹದ ನಡುವೆ ಹೆಚ್ಚು ಪ್ರಚಲಿತಕ್ಕೆ ಬರುತ್ತದೆ ಎಂದರು.
ಪುಂಡಲೀಕ್​ ನಾಯಕ್​ ಅವರ ಜೀವಮಾನದ ಸಾಧನೆಗಾಗಿ ಮಾಧವ ಮಂಜುನಾಥ್​ ಶಾನಭಾಗ್​ ಜೀವನ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು. ಚೇತನ್​ ಆಚಾರ್ಯ, ಮರಿಯಾ ಲೀಮಾ ಇತರರಿದ್ದರು.