ಸಾಗರದಲ್ಲಿ ಸಮರ್ಥ ಲೀಜನ್ ಸಮಾಜ ಸೇವಾ ಸಂಸ್ಥೆ ಸ್ಥಳೀಯ ಘಟಕವನ್ನು ಸಾಗರದ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಉದ್ಘಾಟಿಸಿದರು. ಸುರೇಖಾ ಮುರಳೀಧರ್, ಜ್ಯೋತಿ, ನೇತ್ರಾ ಉಡುಪ, ಕಸ್ತೂರಿ ಕೃಷ್ಣಮೂರ್ತಿ ಇತರರಿದ್ದರು.
ಸಾಗರ: ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ವಿವಿಧ ಸಂಘಟನೆಗಳ ಅಗತ್ಯವಿದೆ. ಲಯನ್ಸ್, ರೋಟರಿ ಕ್ಲಬ್‌ನಂತೆ ಶ್ರೀ ಸಮರ್ಥ ಲೀಜನ್ ಕೂಡಾ ಸಮಾಜಮುಖಿ ಸಂಸ್ಥೆಯಾಗಿದೆ ಎಂದು ಸಾಗರದ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಸಾಗರದ ಶೃಂಗೇರಿ ಶಂಕರಮಠದ ಭಾರತೀ ತೀರ್ಥ ಸಭಾಭವನದಲ್ಲಿ ಮಂಗಳವಾರ ಸಾಗರ ಶ್ರೀ ಸಮರ್ಥ ಲೀಜನ್ ಸ್ಥಳೀಯ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ, ಲಯನ್ಸ್ ಸಂಸ್ಥೆಗಳು ವಿದೇಶದಲ್ಲಿ ಜನ್ಮತಾಳಿ ಭಾರತದಾದ್ಯಂತ ವಿಸ್ತರಿಸಿವೆ. ಶ್ರೀ ಸಮರ್ಥ ಲೀಜನ್ ಸಂಸ್ಥೆ ಕೇರಳದ ಕೊಚ್ಚಿನ್‌ನಲ್ಲಿ ಜನ್ಮತಾಳಿ ದೇಶಾದ್ಯಂತ ಶಾಖೆಗಳನ್ನು ತೆರೆದು ಕಾರ್ಯನಿರ್ವಹಿಸುತ್ತಿದೆ. ಸಮಾಜ ನಮಗೆ ಸಾಕಷ್ಟು ಕೊಡುಗೆ ನೀಡಿರುತ್ತದೆ. ನಮ್ಮ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾದ ಸಮಾಜಕ್ಕೆ ನಾವೂ ಒಂದಷ್ಟು ಕೊಡುಗೆ ನೀಡಬೇಕಾದುದು ನಮ್ಮ ಜವಾಬ್ದಾರಿ. 40 ವರ್ಷ ಮೇಲ್ಪಟ್ಟವರು ಸೀನಿಯರ್ ಚೇಂಬರ್ ಮೂಲಕ ಸಮಾಜ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದರು.
ಸಂಸ್ಥೆಯ ರಾಷ್ಟ್ರ ಉಪಾಧ್ಯಕ್ಷೆ ಸುರೇಖಾ ಮುರಳೀಧರ್ ಮಾತನಾಡಿ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಸೇವಾ ಕಾರ್ಯ ಕೈಗೊಳ್ಳುವುದು ಶ್ಲಾಘನೀಯ. ವಿಶ್ವದಾದ್ಯಂತ ನಮ್ಮ ಸಂಸ್ಥೆ ಸಾಮಾಜಿಕ ಕೆಲಸ ಮಾಡುತ್ತಿದೆ. ಕೌಟುಂಬಿಕ ನಿರ್ವಹಣೆ ಜತೆಗೆ ಇಂತಹ ಸಂಸ್ಥೆಗಳ ಮೂಲಕ ಸಾಮಾಜಿಕ ಸೇವೆ ಮಾಡಲು ಬಯಸುವ ಮಹಿಳೆಯರು ಇಂತಹ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬಹುದು ಎಂದು ತಿಳಿಸಿದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜ್ಯೋತಿ ಮಣೂರು, ಕಾರ್ಯದರ್ಶಿ ನೇತ್ರಾ ಉಡುಪ, ಖಜಾಂಚಿ ಕಸ್ತೂರಿ ಕೃಷ್ಣಮೂರ್ತಿ ಆಯ್ಕೆಯಾದರು. ಗಿರಿಜಾ ರಾಮಚಂದ್ರ, ಪ್ರೇಮಾ ಹೆಗಡೆ, ಸುಜಾತಾ, ಶೈಲಾ, ಸುವರ್ಣಾ, ಭಾನುಶ್ರೀ, ಜ್ಯೋತಿ, ಸುಜಾತಾ ವಸಂತ, ನಾಗಶ್ರೀ, ಗೋಪಿ ದೀಕ್ಷಿತ್, ಮಾ.ಸ.ನಂಜುಂಡಸ್ವಾಮಿ, ಪ್ರಭಾವತಿ ಇತರರಿದ್ದರು.