ಹೊಳೆಹೊನ್ನೂರು ಪಪಂ ಕಚೇರಿಯಲ್ಲಿ ಇ ಆಸ್ತಿ ದಾಖಲೆಗಾಗಿ ಆನ್ಲೈನ್ ಅರ್ಜಿ ಸಲ್ಲಿಕೆ ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯಾಧಿಕಾರಿ ಮಂಜುನಾಥ ಮಾತನಾಡಿದರು. ಎಂ.ಕೆ.ಭರತ್, ಹೇಮಂತ್ ಇದ್ದರು.
ಹೊಳೆಹೊನ್ನೂರು: ಸಾರ್ವಜನಿಕರು ಆಸ್ತಿಗಳಿಗೆ ಸಂಬಂಧಿಸಿದ ಇ& ಆಸ್ತಿ ದಾಖಲೆ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ ಹೇಳಿದರು.
ಪಪಂ ಕಚೇರಿ ಸಭಾಂಗಣದಲ್ಲಿ ಇ ಆಸ್ತಿ ದಾಖಲೆ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಕೆ ಬಗ್ಗೆ ಸೈಬರ್ ಸೆಂಟರ್ ಮಾಲೀಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇ&ಆಸ್ತಿ ಅಂದರೆ ರಾಜ್ಯದ ನಗರ, ಸ್ಥಳಿಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಮತ್ತು ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ ಆನ್ಲೈನ್ ವ್ಯವಸ್ಥೆಯಾಗಿದೆ. ಇದು ನಾಗರಿಕರಿಗೆ ಆಸ್ತಿ ನೋಂದಣಿ, ಖಾತಾ ಪಡೆಯಲು ಮತ್ತು ಆಸ್ತಿ ತೆರಿಗೆ ಪಾವತಿಸಲು ಅನುಕೂಲ ಒದಗಿಸುತ್ತದೆ. ಮಹಾನಗರ ಪಾಲಿಕೆ, ನಗರ, ಸ್ಥಳಿಯ ಸಂಸ್ಥೆಗಳ ಆಸ್ತಿ ನಿರ್ವಹಣಾ ವ್ಯವಸ್ಥೆ. ಸಂಬಂಧಿತ ಇತರ ಸೇವೆಗಳನ್ನು ಆನ್ಲೈನ್ನಲ್ಲಿ ಒದಗಿಸಲಾಗಿದೆ ಎಂದರು.
ಪಪಂ ಕಚೇರಿ ತಾಂತ್ರಿಕ ಅಧಿಕಾರಿ ಎಂ.ಕೆ.ಭರತ್ ತರಬೇತಿ ಕಾರ್ಯಾಗಾರ ನಡೆಸಿದರು. ಪಟ್ಟಣ ಪಂಚಾಯಿತಿ ರಾಜಸ್ವ ನಿರೀಕ ಹೇಮಂತ್, ಸಿಬ್ಬಂದಿ ಕೆ.ರಂಗನಾಥ್, ಅಣ್ಣಪ್ಪಸ್ವಾಮಿ, ರಂಗಪ್ಪ, ಸ್ವಾಮಿ, ಜಯಶ್ರೀ ಇತರರಿದ್ದರು.