ರವೀಂದ್ರನಗರದಲ್ಲಿ ವೃದ್ಧೆ ಪ್ರಭಾವತಿ ವಾಸವಿದ್ದ ಮನೆ.
- ಸಾಕು ನಾಯಿ ಕೂಡ ಮನೆಯೊಳಗೆ ಸಾವು
- ರವೀಂದ್ರನಗರದ 1ನೇ ಅಡ್ಡರಸ್ತೆಯ ಮನೆಯಲ್ಲಿ ಘಟನೆ
- ಒಬ್ಬರೇ ವಾಸ, ಮೂವರು ಪುತ್ರಿಯರಿದ್ದರೂ ಸಂಪರ್ಕದಲ್ಲಿರಲಿಲ್ಲ
ಶಿವಮೊಗ್ಗ: ನಗರದ ರವೀಂದ್ರನಗರದ 1ನೇ ಅಡ್ಡರಸ್ತೆಯ ಮನೆಯಲ್ಲಿ ವೃದ್ಧೆಯ ಮೃತದೇಹ(Old woman's dead body) ಶನಿವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಕು ನಾಯಿ ಕೂಡ ಆಹಾರವಿಲ್ಲದೆ ನಿತ್ರಾಣಗೊಂಡು ಮನೆಯೊಳಗೆ ಸಾವನ್ನಪ್ಪಿದೆ.
ಪ್ರಭಾವತಿ(60) ಮೃತ ವೃದ್ಧೆ. ಪತಿ ನಾಗರಾಜ್ ಈ ಹಿಂದೆಯೇ ಮೃತಪಟ್ಟಿದ್ದು, ಮೂವರು ಪುತ್ರಿಯರಿದ್ದರೂ ಪ್ರಭಾವತಿ ಅವರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಒಬ್ಬರೇ ವಾಸವಾಗಿದ್ದರು ಎನ್ನಲಾಗಿದೆ. ಮನೆಯಿಂದ ದುರ್ವಾಸನೆ(Bad smell) ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಶನಿವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಜಯನಗರ ಠಾಣೆ ಪೊಲೀಸರು(Jayanagar Station Police)ಸ್ಥಳಕ್ಕೇ ಭೇಟಿ ನೀಡಿ ಪರಿಶೀಲಿಸಿದಾಗ ಬಾಗಿಲುಗಳು ಒಳಗಡೆಯಿಂದ ಲಾಕ್ ಆಗಿದ್ದವು. ಬಳಿಕ ಲಾಕ್‌ಗಳನ್ನು ಮುರಿದು ನೋಡಿದಾಗ ಮನೆಯೊಳಗೆ ಪ್ರಭಾವತಿ ಮತ್ತು ಸಾಕು ನಾಯಿ(Pet dog)ಯ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಭಾವತಿ ಅವರು ಮೃತಪಟ್ಟು ಸುಮಾರು 10 ದಿನ ಆಗಿರುಬಹುದು ಎಂದು ಶಂಕಿಸಲಾಗಿದೆ.
ಜನವಾರ್ತೆ ಪತ್ರಿಕೆಯ ಮಾಲೀಕರಾಗಿದ್ದ ನಾಗರಾಜ ಅವರ ಪತ್ನಿಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದು, ಸುಮಾರು 15 ದಿನದ ಹಿಂದೆ ಮನೆಯ ಎದುರಿನ ಕ್ಯಾಂಟೀನ್‌ನಿಂದ ಉಪಾಹಾರ ಪಾರ್ಸೆಲ್(Breakfast parcel)ತೆಗೆದುಕೊಂಡು ಹೋಗಿದ್ದ ಪ್ರಭಾವತಿ ಅವರು ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ(Postmortem examination)ಗೆ ಮೆಗ್ಗಾನ್ ಶವಗಾರಕ್ಕೆ ಸಾಗಿಸಿದರು. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.