ಶಿವಮೊಗ್ಗದ ಸೈಬರ್ ಠಾಣೆ 
ಶಿವಮೊಗ್ಗ

ಜ್ಯೋತಿಷಿ ಹೆಸರಲ್ಲಿ ನರ್ಸ್‌ಗೆ ಮೋಸ | Nurse Cheated

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶ
  • 1.84 ಲಕ್ಷ ರೂ. ಮೋಸಕ್ಕೆ ಒಳಗಾದ ನರ್ಸ್‌
  • ಸಮಸ್ಯೆ ಬಗೆಹರಿಸಲು ವಿವಿಧ ರೀತಿ ಪೂಜೆ ನೆಪ
ಶಿವಮೊಗ್ಗ: ಸಾಮಾಜಿಕ ಜಾಲತಾಣ(Social Network)ದಲ್ಲಿ ಬಂದ ಸಂದೇಶ ನೋಡಿ ಜ್ಯೋತಿಷ್ಯ ಕೇಳಿದ್ದ ಶಿವಮೊಗ್ಗ ಹೊಸಮನೆಯ ನರ್ಸ್‌ಗೆ 1.84 ಲಕ್ಷ ರೂ. ವಂಚಿಸಲಾಗಿದೆ.
26ವರ್ಷದ ನರ್ಸ್ ವಂಚನೆ(Nurse Cheated)ಗೆ ಒಳಗಾದವರು. 2025 ಸೆ.14ರಂದು ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ(Instagram) ನೋಡುವಾಗ ಜಾಹಿರಾತು ಬಂದಿತ್ತು. ಅದರಲ್ಲಿ ಜ್ಯೋತಿಷಿ ಹೆಸರು ಮತ್ತು ಮೊಬೈಲ್ ನಂಬರ್ ಇತ್ತು. ಆ ನಂಬರ್‌ಗೆ ಕರೆ ಮಾಡಿದ್ದ ನರ್ಸ್‌ಗೆ ಸಮಸ್ಯೆ ಬಗೆಹರಿಸಲು ಸಣ್ಣದೊಂದು ಪೂಜೆ ಮಾಡಿಸಲು 501 ರೂ. ಗೂಗಲ್ ಪೇ ಮಾಡಿಸಿಕೊಂಡಿದ್ದರು.
ಅರ್ಧ ಗಂಟೆ ಬಿಟ್ಟು ಮತ್ತೆ ಕರೆ ಮಾಡಿದ್ದ ಜ್ಯೋತಿಷಿ ನಿಮ್ಮ ತಾಯಿಗೆ ಮಾಟಮಂತ್ರ ಮಾಡಿಸಿದ್ದಾರೆ. ಅದನ್ನು ಪರಿಹರಿಸಲು 25 ಸಾವಿರ ರೂ. ಖರ್ಚಾಗುತ್ತದೆ ಎಂದಿದ್ದರು. ಅದರಂತೆ ಅಷ್ಟೂ ಹಣವನ್ನು ನರ್ಸ್ ಫೋನ್ ಪೇ(Phone Pay) ಮಾಡಿದ್ದರು. ಬಳಿಕ ಮುಖ್ಯ ಗುರೂಜಿ ಮಾತನಾಡುತ್ತಾರೆ ಎಂದು ಫೋನ್ ಕೊಟ್ಟಿದ್ದ ವಂಚಕರು, ತಾಯಿ ಫೋಟೋ, ಹಸ್ತದ ಫೋಟೋವನ್ನು ವಾಟ್ಸ್‌ಆ್ಯಪ್ ಮಾಡಿಸಿಕೊಂಡಿದ್ದರು. 
ಪದೇಪದೆ ಫೋನ್ ಮಾಡುತ್ತ ನಿಮ್ಮ ತಾಯಿಗೆ ಅನೇಕ ಸಮಸ್ಯೆಗಳಿವೆ. ಪರಿಹರಿಸಲು ವಿವಿಧ ರೀತಿ ಪೂಜೆಗಳನ್ನು ಮಾಡುವುದಾಗಿ ನಂಬಿಸಿ ಹಂತ ಹಂತವಾಗಿ ಕರ್ನಾಟಕ ಬ್ಯಾಂಕ್ ಖಾತೆಗೆ 97,302 ರೂ. ಹಾಗೂ ಕೆನರಾ ಬ್ಯಾಂಕ್ ಖಾತೆಗೆ 87 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಬಗ್ಗೆ ನರ್ಸ್ ಶಿವಮೊಗ್ಗದ ಸೈಬರ್ ಠಾಣೆ(Shivamogga Cyber ​Station)ಗೆ ದೂರು ನೀಡಿದ್ದಾರೆ.