ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಣಕಾಸು ವಿಶ್ಲೇಷಕ ಡಾ. ಆರ್.ಶಂಕರನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಡಾ. ಪಿ.ಎ.ವರ್ಗೀಸ್, ಡಾ. ಸತೀಶ್‌ಕುಮಾರ್ ಇದ್ದರು. 
ಶಿವಮೊಗ್ಗ

ಬಂಡವಾಳ ಹೂಡಿಕೆ ಇಲ್ಲದೆ ಉದ್ಯೋಗ ಸಾಧ್ಯವಿಲ್ಲ | Budget

ಶಿವಮೊಗ್ಗ: ಇಂದಿನ ಸಂದರ್ಭದಲ್ಲಿ ಬಂಡವಾಳ ಹೂಡಿಕೆ ಇಲ್ಲದೆ ಯಾವುದೇ ಉದ್ಯೋಗವನ್ನು ಆರಂಭಿಸುವುದು ಸಾಧ್ಯವಿಲ್ಲ ಎಂದು ಹಣಕಾಸು ವಿಶ್ಲೇಷಕ(Financial Analyst) ಡಾ. ಆರ್.ಶಂಕರನಾರಾಯಣ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಪತ್ರಿಕೋದ್ಯಮ(Journalism)ದ ದೃಷ್ಟಿಕೋನದಿಂದ ಬಜೆಟ್ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಭಾರತದಲ್ಲಿ ರೂಪಾಯಿ ಚಲಾವಣೆಯಾಗುತ್ತದೆ. ಆದರೆ ಅನ್ಯ ದೇಶಗಳಲ್ಲಿ ಅದನ್ನು ನೇರವಾಗಿ ಬಳಸಲು ಸಾಧ್ಯವಿಲ್ಲ. ಆದ್ದರಿಂದ ರಫ್ತು-ಆಮದು(Export-Import) ಪ್ರಕ್ರಿಯೆಗಳ ಮೂಲಕವೇ ಇತರೆ ದೇಶಗಳೊಂದಿಗೆ ವ್ಯವಹಾರ ನಡೆಸಲಾಗುತ್ತದೆ ಎಂದರು.
ಜಿಎಸ್‌ಟಿ(GST) ಜಾರಿಗೆ ಬಂದ ನಂತರ ತೆರಿಗೆ ತಪ್ಪಿಸುವುದು ಅಸಾಧ್ಯವಾಗಿದೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪ್ರತಿಯೊಬ್ಬರೂ ತೆರಿಗೆ ಕಟ್ಟುತ್ತಿದ್ದಾರೆ ಎಂದರು. ವಿಭಾಗದ ಮುಖ್ಯಸ್ಥ ಡಾ. ಪಿ.ಎ.ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ. ಸತೀಶ್‌ಕುಮಾರ್ ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು.