ಸಾಗರದ ಪ್ರಜ್ಞಾ ಭಾರತಿ ಶಾಲೆಯಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಪರಿಸರ ತಜ್ಞ ಚಕ್ರವಾಕ ಸುಬ್ರಮಣ್ಯ ಮಾತನಾಡಿದರು. ಭಾರತೀ ಶರ್ಮಾ, ಗಜಾನನ ಭಟ್, ಸದಾನಂದ ಶರ್ಮ ಇದ್ದರು.
- ಪರಿಸರ ಜಾಗೃತಿ ಆಂದೋಲನ
- ಪರಿಸರ ತಜ್ಙ ಚಕ್ರವಾಕ ಸುಬ್ರಮಣ್ಯ ಹೇಳಿಕೆ
- ಆಧುನಿಕತೆ ನೆಪದಲ್ಲಿ ಪರಿಸರದ ಕಡೆಗಣನೆ
ಸಾಗರ: ಪ್ರಕೃತಿ, ಪರಿಸರದೊಂದಿಗೆ ನಮ್ಮ ಪೂರ್ವಜರು ಬದುಕು ರೂಪಿಸಿಕೊಂಡಿದ್ದರು. ಹಾಗಾಗಿ ಆರೋಗ್ಯಪೂರ್ಣ ಜೀವನ ನಡೆಸುವ ಜತೆಗೆ ನೂರು ವರ್ಷಗಳ ಕಾಲ ಬದುಕಿರುತ್ತಿದ್ದರು ಎಂದು ಪರಿಸರ ತಜ್ಙ ಚಕ್ರವಾಕ ಸುಬ್ರಮಣ್ಯ ಹೇಳಿದರು.
ಸಾಗರದ ಪ್ರಜ್ಞಾಭಾರತಿ ವಿದ್ಯಾಮಂದಿರದಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಜೀವನಶೈಲಿ ಅನುಸರಿಸುವ ಧಾವಂತದಲ್ಲಿ ನಾವು ಎಲ್ಲವನ್ನೂ ಕಡೆಗಣಿಸುತ್ತಿದ್ದೇವೆ ಎಂದರು.
ಪರಿಸರದೊಂದಿಗೆ ನಮ್ಮ ಜೀವನ ದೂರವಾಗುತ್ತಿದ್ದು, ಪ್ರಕೃತಿ ನಾಶ ಮಾಡುತ್ತಿದ್ದೇವೆ. ಇದರ ಪರಿಣಾಮ ಇಂದು ಅನುಭವಿಸುವಂತಾಗಿದೆ. ಆಧುನಿಕ ಜೀವನಶೈಲಿ ಪರಿಸರಕ್ಕೆ ಮಾರಕವಾಗುತ್ತಿದ್ದರೂ ನಾವು ಸ್ವಾರ್ಥಕ್ಕಾಗಿ ಅದನ್ನೇ ಅಭಿವೃದ್ಧಿ ಎಂದು ಭಾವಿಸುತ್ತಿದ್ದೇವೆ. ಮುಂದಿನ ಪೀಳಿಗೆಗೆ ಅತ್ಯಂತ ದುಸ್ತರವಾದ ಬದುಕನ್ನು ಬಿಟ್ಟು ಹೋಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯ ಶಿಕಿ ಭಾರತೀ ಶರ್ಮಾ, ಸಂಸತ ವಿದ್ವಾನ್ ಗಜಾನನ ಭಟ್ ರೇವಣಕಟ್ಟಾ, ಸದಾನಂದ ಶರ್ಮ ಇತರರಿದ್ದರು,