ಹೊಂಬುಜ ಜೈನಮಠದಲ್ಲಿ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನಾಗದೇವರಿಗೆ ಪೂಜೆ ಸಲ್ಲಿಸಿದರು.
ರಿಪ್ಪನ್‌ಪೇಟೆ: ಜೈನಧರ್ಮದ ಶ್ರೀ ಸುಪಾರ್ಶ್ವ ತೀರ್ಥಂಕರ, ಶ್ರೀ ಪಾರ್ಶ್ವನಾಥ ತೀರ್ಥಂಕರರು ನಾಗದೇವತೆಯ ಕೃಪೆಗೊಳಗಾದವರು. ರಕ್ಷಕರಾಗಿ ವಿಘ್ನಗಳನ್ನು ನಿವಾರಿಸಿದ ಐತಿಹ್ಯವಿದೆ ಎಂದು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಹೊಂಬುಜ ಜೈನಮಠದಲ್ಲಿ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಪಂಚಮಿ ಸರ್ವರಿಗೂ ಪ್ರಕೃತಿ ಆರಾಧನೆ ಪರ್ವ ಎಂದು ಹೇಳಿದರು.
ಅಧಿನಾಯಕ ಶ್ರೀ ಪಾರ್ಶ್ವನಾಥ ತೀರ್ಥಂಕರ, ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಾನದಂತೆ ಪೂಜೆ ಸಲ್ಲಿಸಲಾಯಿತು. ಶ್ರೀ ನಾಗದೇವರ ಸನ್ನಿಧಿಯಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಆರಾಧನೆ, ಪೂಜೆಯನ್ನು ಎಳನೀರು, ಹಾಲು, ಅರಿಶಿಣ, ಫಲ-ಪುಷ್ಪ ಸಮರ್ಪಣೆ ನೆರವೇರಿಸಲಾಯಿತು. ಶ್ರಿ ಕುಂದಕುಂದ ಗುರುಕುಲದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.