ಶಿಕಾರಿಪುರ ಪಟ್ಟಣದ ಸಾಲುಮರದ ತಿಮ್ಮಕ್ಕ ನೆಡುತೋಪಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಎನ್.ರಮೇಶ್ ಬಾಬು ಚಾಲನೆ ನೀಡಿದರು. ಧನಂಜಯ್ ಹೆಗಡೆ , ಎಂ.ಜಿ.ಉಮೇಶ್, ಪಿ.ಜೆ.ವಿನಯ್ ಬಾಬು ಮುಂತಾದವರಿದ್ದರು.
- ಸಸಿ ನೆಡುವ ಕಾರ್ಯಕ್ರಮ
- ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಎನ್.ರಮೇಶ್ ಬಾಬು ಅಭಿಮತ
- ಪರಿಸರ ಸಮತೋಲನ ಕಾಪಾಡಿ
ಶಿಕಾರಿಪುರ: ನಾವು ಶುಭ ಸಮಾರಂಭಗಳಲ್ಲಿ ಗಿಡಗಳನ್ನು ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನವದಂಪತಿ ಹೆಸರಿನಲ್ಲಿ ನೀಡುವ ಎರಡು ಗಿಡಗಳು ಪ್ರಕೃತಿಗೆ ಕೊಡುಗೆಯಾಗಿ ನೆರಳು ಮತ್ತು ಲಗಳನ್ನು ನೀಡುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಎನ್.ರಮೇಶ್ ಬಾಬು ಹೇಳಿದರು.
ಪಟ್ಟಣದ ಸಾಲುಮರದ ತಿಮ್ಮಕ್ಕ ನೆಡುತೋಪಿನಲ್ಲಿ ತಾಲೂಕು ಅರಣ್ಯ ಇಲಾಖೆ, ಚಂದನ್ ಜೆಸಿಸ್ ಹಾಗೂ ಪರೋಪಕಾರಂ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಪ್ರಕೃತಿಗೆ ಯಾವಾಗಲೂ ಋಣಿಗಳಾಗಿರಬೇಕು ಎಂದರು.
ಯಾವ ಕಾರಣಕ್ಕೂ ಪ್ರಕೃತಿಯನ್ನು ವಿಕೃತಗೊಳಿಸಬಾರದು. ಪ್ರಕೃತಿ ನಮ್ಮ ಬದುಕಿಗೆ ಉಸಿರಾಗಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸಬೇಕಾದ ತುರ್ತು ಅಗತ್ಯವಿದೆ. ಕೈಗಾರಿಕೆಗಳಿಂದ ಹಾಗೂ ವಾಹನಗಳ ಹೊಗೆಯಿಂದಾಗಿ ನಮ್ಮ ಪರಿಸರ ಕಲುಷಿತಗೊಳ್ಳುತ್ತಿದೆ. ಇಂದಿನ ವಿದ್ಯಾರ್ಥಿಗಳು ಮುಂದಿನ ಭವ್ಯ ಭಾರತದ ಪ್ರಜೆಗಳಾಗಿದ್ದು ಮೊದಲು ನಾವು ನಮ್ಮ ಸುತ್ತಮುತ್ತಲ ಪರಿಸರವನ್ನು ಸಮತೋಲನವಾಗಿಟ್ಟುಕೊಳ್ಳಲು ಹೆಚ್ಚು ಗಿಡಗಳನ್ನು ಬೆಳೆಸಬೇಕು ಎಂದು ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಧನಂಜಯ್ ಹೆಗಡೆ, ತಾಲೂಕು ವಕೀಲರ ಸಂದ ಅಧ್ಯ ಎಂ.ಜಿ.ಉಮೇಶ್, ಕಾರ್ಯದರ್ಶಿ ಪಿ.ಜೆ.ವಿನಯ್ ಬಾಬು, ಎಸಿಎ್ ರವೀಂದ್ರ ನಾಯ್ಕ್, ಆರ್ಎ್ಒಗಳಾದ ಪರಶುರಾಮ್, ಶಾಂತಪ್ಪ ಪೂಜಾರ್, ಕೆಎ್ಡಿಸಿ ಅಧೀಕ ಅಶ್ವಿನ್, ಜೇಸಿಸ್ ಅಧ್ಯ ಶಾಂತರಾಮ್ ಆರ್. ಶೇಟ್, ಪರೋಪಕರಂನ ಮಧುಕೇಶವ ಮತ್ತಿತರರಿದ್ದರು.