ಶಿಕಾರಿಪುರದ ಅಂಬಾರಗೊಪ್ಪದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮನ್ ಕೀ ಬಾತ್ ವೀಕ್ಷಿಸಿದರು. ಕೃಷ್ಣ ನಾಯ್ಕ ಇದ್ದರು. 
ಶಿವಮೊಗ್ಗ

ರಾಷ್ಟ್ರಚಿಂತನೆ ಪ್ರತಿಯೊಬ್ಬರಿಗೂ ಸ್ಫೂರ್ತಿ

ಶಿಕಾರಿಪುರ: ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಶ್ರೇಷ್ಠ ಆಡಳಿತಗಾರ ಪ್ರಧಾನಿ ನರೇಂದ್ರ ಮೋದಿ ಎಂದು MP ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣಿಸಿದರು.
ತಾಲೂಕಿನ ಅಂಬಾರಗೊಪ್ಪದಲ್ಲಿ ಸಾರ್ವಜನಿಕರೊಂದಿಗೆ ಮನ್ ಕೀ ಬಾತ್ ವೀಕ್ಷಿಸಿ ಮಾತನಾಡಿ, ಪ್ರಧಾನಿ ಮೋದಿ MODI ಅವರು ದೇಶದ ಜನಸಾಮಾನ್ಯರ ಪ್ರೇರಣಾದಾಯಿ ಸಾಧನೆಗಳು ಹಾಗೂ ರಾಷ್ಟ್ರದ ಪ್ರಗತಿಯ ವಿವಿಧ ಆಯಾಮಗಳನ್ನು ಹಂಚಿಕೊಳ್ಳುತ್ತಾರೆ. ಇದರೊಂದಿಗೆ ದೇಶದ ಜನರಲ್ಲಿ ಸ್ಫೂರ್ತಿ ತುಂಬುತ್ತಾರೆ. ಅವರ ರಾಷ್ಟ್ರಚಿಂತನೆಗಳು ಪ್ರತಿಯೊಬ್ಬ ಕಾರ್ಯಕರ್ತನಿಗೂ ಮತ್ತು ಸ್ಥಳೀಯರಿಗೂ ಹೊಸ ಚೈತನ್ಯ ನೀಡುತ್ತವೆ ಎಂದು ತಿಳಿಸಿದರು.
BJP ಬೂತ್ ಅಧ್ಯಕ್ಷ ಕೃಷ್ಣ ನಾಯ್ಕ, ಪ್ರಮುಖರಾದ ಕೆ.ಎಸ್.ಗುರುಮೂರ್ತಿ, ವಸಂತ್ ಗೌಡ, ನಾಗಪ್ಪ, ಕೃಷ್ಣ ನಾಯ್ಕ, ಸುಧೀರ್, ಪ್ರವೀಣ್ ಇತರರಿದ್ದರು.