ಪಿಇಎಸ್ ಐಎಎಂಎಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾವೇರಿ ಟಂಡನ್ ಪದವಿ ಪ್ರಮಾಣಪತ್ರ ವಿತರಿಸಿದರು. ಎಸ್.ವೈ.ಆರುಣಾದೇವಿ, ಡಾ. ಆರ್.ನಾಗರಾಜ್, ಡಿ.ಎಸ್.ರೂಪಾ, ಡಾ. ಎಸ್.ದಿಲೀಪ್‌ಕುಮಾರ್, ಡಾ. ಎಚ್.ಆರ್.ಮಂಜುನಾಥ್ ಇದ್ದರು. 
ಶಿವಮೊಗ್ಗ

ರಾಷ್ಟ್ರೀಯ ಭದ್ರತೆ ಎಲ್ಲರಿಗೂ ಸೇರಿದ್ದು I national sequrity

ಪ್ರಮುಖ ಮುಖ್ಯಾಂಶಗಳು

  • ಸೈಬರ್ ಸೆಕ್ಯೂರಿಟಿಗೆ ಇದೆ ಹೆಚ್ಚಿನ ಮಹತ್ವ
  • ಆರ್‌ಆರ್‌ಯು ಶಿವಮೊಗ್ಗ ಕ್ಯಾಂಪಸ್‌ನ ನಿರ್ದೇಶಕಿ ಕಾವೇರಿ ಟಂಡನ್ ಹೇಳಿಕೆ
ಶಿವಮೊಗ್ಗ: ರಾಷ್ಟ್ರೀಯ ಭದ್ರತೆ (sequrity) ಯ ಜವಾಬ್ದಾರಿ ಸೈನಿಕರು ಅಥವಾ ಭದ್ರತಾ ಸಂಸ್ಥೆಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲ ನಾಗರಿಕರೂ ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು. ಸೈಬರ್ (cyber) ಸೆಕ್ಯೂರಿಟಿ, ಎಕಾನಮಿ ಮತ್ತು ಸೋಶಿಯಲ್ (social) ಸೆಕ್ಯೂರಿಟಿಗಳು ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚು ಮಹತ್ವ ಪಡೆದಿವೆ ಎಂದು ರಾಷ್ಟ್ರೀಯ ರಕ್ಷಾ ವಿವಿ ಶಿವಮೊಗ್ಗ ಕ್ಯಾಂಪಸ್‌ನ ನಿರ್ದೇಶಕಿ ಕಾವೇರಿ ಟಂಡನ್ ಹೇಳಿದರು.
ನಗರದ ಸಾಗರ ರಸ್ತೆಯ ಪಿಇಎಸ್ ಐಎಎಂಎಸ್ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ 8ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, 21ನೇ ಶತಮಾನದಲ್ಲಿ ರಕ್ಷಣೆಯ ವ್ಯಾಖ್ಯಾನಗಳೇ ಬದಲಾವಣೆಯಾಗಿವೆ. ರಕ್ಷಣೆ ಎಂಬುದು ದೇಶದ ಗಡಿಗೆ ಮಾತ್ರವಲ್ಲ, ನಮ್ಮ ನಿತ್ಯದ ಬದುಕಿಗೂ ಅನ್ವಯಿಸುವಂಥದ್ದು ಎಂದರು.
ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಏಳಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಸಾಧನೆಯ ಹಾದಿಯಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು ಎಂದರು.
ಪಿಇಎಸ್ ಟ್ರಸ್ಟ್ ಟ್ರಸ್ಟಿ ಹಾಗೂ ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಅಧ್ಯಕ್ಷತೆ ವಹಿಸಿದ್ದರು. ಪಿಇಎಸ್ ಟ್ರಸ್ಟ್ ಕುಲಸಚಿವ ಡಾ. ಆರ್.ನಾಗರಾಜ್, ಪ್ರಾಚಾರ್ಯ ಡಾ. ಜಿ.ಎಂ.ಸುದರ್ಶನ್, ಸಂಯೋಜಕ ಡಾ. ಎಸ್.ದಿಲೀಪ್‌ಕುಮಾರ್, ವಿಭಾಗದ ಮುಖ್ಯಸ್ಥೆ ಡಿ.ಎಸ್.ರೂಪಾ, ಪ್ರಮುಖರಾದ ಡಿ.ಮೋಹನ್, ಡಾ. ಎಚ್.ಆರ್.ಮಂಜುನಾಥ್, ಡಾ. ಯಶಸ್ವಿ ಚೌಹಾಣ್ ಉಪಸ್ಥಿತರಿದ್ದರು.
ಎಂಕಾಂನ 4, ಬಿಕಾಂನ 3 ಹಾಗೂ ಬಿಸಿಎ ಪದವಿ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9 ರ‌್ಯಾಂಕ್ ವಿಜೇತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಕಂಪನಿಗಳಿಗೆ ಆಯ್ಕೆಯಾಗಿರುವ 103 ವಿದ್ಯಾರ್ಥಿಗಳಿಗೆ ಆಫರ್ ಲೆಟರ್‌ಗಳನ್ನು ಹಸ್ತಾಂತರಿಸಲಾಯಿತು.