ಶಿವಮೊಗ್ಗ ನಗರದಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಗಂಡು ಚಿರತೆ ಭದ್ರಾನಿಗೆ ಎಂಆರ್‌ಐ ಸ್ಕಾೃನಿಂಗ್ ಮಾಡುತ್ತಿರುವುದು. 
ಶಿವಮೊಗ್ಗ

ಖಾಸಗಿ ಆಸ್ಪತ್ರೆಯಲ್ಲಿ ಚಿರತೆಗೆ ಎಂಆರ್‌ಐ ಸ್ಕ್ಯಾನಿಂಗ್ ! MRI Scanning

ಪ್ರಮುಖ ಮುಖ್ಯಾಂಶಗಳು

  • ವಯೋಸಹಜ ಸಮಸ್ಯೆಯಿಂದ ಅನಾರೋಗ್ಯಕ್ಕೀಡಾದ ಗಂಡು ಚಿರತೆ
  • ನಂಜಪ್ಪ ಆಸ್ಪತ್ರೆಯಲ್ಲಿ ತಡರಾತ್ರಿ ಸುಮಾರು ಅರ್ಧ ಗಂಟೆ ಪರೀಕ್ಷೆ
  • 2 ದಿನಗಳಿಂದ ನಿತ್ರಾಣಗೊಂಡಿದ್ದ ಲಯನ್ ಸಫಾರಿಯ ಭದ್ರಾ
ಶಿವಮೊಗ್ಗ: ವಯೋಸಹಜ ಸಮಸ್ಯೆಯಿಂದ ಅನಾರೋಗ್ಯಕ್ಕೀಡಾದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಗಂಡು ಚಿರತೆ(Male Leopard) ಭದ್ರಾನಿಗೆ ಶುಕ್ರವಾರ ತಡರಾತ್ರಿ ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್( MRI Scanning) ಮಾಡಿ ಪರೀಕ್ಷಿಸಲಾಯಿತು.
ಕಳೆದೆರಡು ದಿನಗಳಿಂದ ಭದ್ರಾ(Bhadra) ನಿತ್ರಾಣಗೊಂಡಿದ್ದ. ಹಾಗಾಗಿ ಚಿಕಿತ್ಸೆ ನೀಡುತ್ತಿದ್ದ ಮೃಗಾಲಯದ ಪಶು ವೈದ್ಯರ ಸಲಹೆ ಮೇರೆಗೆ ಕಾರ್ಯನಿರ್ವಾಹಕ ನಿರ್ದೇಶಕ ಅಮರೇಶ್ವರ ನೇತೃತದ ತಂಡ ಅರಿವಳಿಕೆ(Anesthesia) ಚುಚ್ಚುಮದ್ದು ನೀಡಿ ತುರ್ತಾಗಿ ಕುವೆಂಪು ರಸ್ತೆಯ ಆಸ್ಪತ್ರೆಗೆ ಕರೆತಂದಿತ್ತು.
ಇದೇ ವೇಳೆ ವನ್ಯಜೀವಿ(Wildlife) ವಿಭಾಗದ ನುರಿತ ವೈದ್ಯರು ಮತ್ತು ನಂಜಪ್ಪ ಆಸ್ಪತ್ರೆ(Nanjappa hospital) ವೈದ್ಯರು ಪರಿಶೀಲನೆ ನಡೆಸಿದರು. ಮೃಗಾಲಯ ಹಾಗೂ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲೂ ಎಂಆರ್‌ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ ಕಾರಣ ನಂಜಪ್ಪ ಆಸ್ಪತ್ರೆಯಲ್ಲೇ ಸ್ಕ್ಯಾನಿಂಗ್ ಮಾಡಲು ನಿರ್ಧರಿಸಲಾಗಿತ್ತು. ಬೆಳಗಿನ ಹೊತ್ತು ಆಸ್ಪತ್ರೆಯಲ್ಲಿ ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ಚಿರತೆಗೆ ತಡರಾತ್ರಿ ಸ್ಕ್ಯಾನಿಂಗ್‌ಗೆ ವ್ಯವಸ್ಥೆ ಮಾಡಲಾಯಿತು. ಸ್ಕ್ಯಾನಿಂಗ್ ಪ್ರಕ್ರಿಯೆ ಆರಂಭವಾಗುವ ಹೊತ್ತಿಗೆ ಪುನಃ ಮಂಪರು ಇಂಜೆಕ್ಷನ್ ನೀಡಲಾಯಿತು. ಸುಮಾರು ಅರ್ಧ ಗಂಟೆ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯಿತು.
ಭದ್ರಾನಿಗೆ ಇತ್ತೀಚೆಗೆ ಮೆಲೇಳಲು ಕಷ್ಟವಾಗುತ್ತಿತ್ತು. ಎಂಆರ್‌ಐ ಸ್ಕ್ಯಾನಿಂಗ್ ಬಲು ದುಬಾರಿಯಾಗಿದ್ದು, ಪಶುವೈದ್ಯಕೀಯ ಕಾಲೇಜಿನಲ್ಲಿ ಆ ಸೌಲಭ್ಯ ಇರಲಿಲ್ಲ. ಸಾಮಾನ್ಯವಾಗಿ ಮನುಷ್ಯರ ಮತ್ತು ಪ್ರಾಣಿಗಳ ದೇಹ ರಚನೆ ಒಂದೇ ರೀತಿಯಾಗಿದ್ದು ಪಶುವೈದ್ಯರ ನೆರವಿನೊಂದಿಗೆ ಅವರ ಸಮ್ಮುಖದಲ್ಲೇ ಸ್ಕ್ಯಾನಿಂಗ್ ಮಾಡಲಾಗಿದೆ ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಕೂಡ ಆದ ಡಾ. ಅಮರೇಶ್ವರ ಹೇಳಿದರು.
ಪ್ರಸ್ತುತ ಲಯನ್ ಸಫಾರಿ(Lion Safari)ಯಲ್ಲಿ 6 ಗಂಡು, 5 ಹೆಣ್ಣು ಚಿರತೆಗಳಿವೆ. ಸ್ಕ್ಯಾನಿಂಗ್ ರಿಪೋರ್ಟ್ ಆಧರಿಸಿ ಚಿಕಿತ್ಸೆ ಮುಂದುವರಿಯಲಿದೆ. ಖಾಸಗಿ ಆಸ್ಪತ್ರೆಗೆ ಚಿರತೆಯನ್ನು ಚಿಕಿತ್ಸೆಗೆ ಕರೆತಂದಿರುವುದು ನನ್ನ ಮೊದಲ ಅನುಭವ ಎಂದರು.
"

ಕಾಡಿನಲ್ಲಿ ಚಿರತೆಗಳು ಸಾಮಾನ್ಯವಾಗಿ 10ರಿಂದ 12 ವರ್ಷ ಬದುಕುತ್ತವೆ. ಮೃಗಾಲಯದಲ್ಲಿರುವ ಭದ್ರಾನಿಗೆ 15 ವರ್ಷ ಆಗಿದೆ. ಕಳೆದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಸ್ಕಾ ್ಯನಿಂಗ್ ಅಗತ್ಯವಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಮನುಷ್ಯರು ಮತ್ತು ಪ್ರಾಣಿಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಒಂದೇ ರೀತಿಯಿದೆ. ಆದ್ದರಿಂದ ಇಲ್ಲಿಗೆ ಕರೆತಂದಿದ್ದೇವೆ. ಮುಂದಿನ ಚಿಕಿತ್ಸೆ ಮೃಗಾಲಯದಲ್ಲಿ ಮುಂದುವರಿಯಲಿದೆ.