ವಿವಿಧ ಕಂಪನಿಗಳ ಹೊಸ ಮೊಬೈಲ್‌ಗಳು.
- ನಗರದ ಬಿ.ಎಚ್.ರಸ್ತೆಯ ಯುನಿಲೆಟ್ ಅಪ್ಲೈಯನ್ಸ್ ಮಳಿಗೆ
- ವಿವಿಧ ಕಂಪನಿಗಳ ಹೊಸ ಮೊಬೈಲ್ ಕಳವು
- ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಯುನಿಲೆಟ್ ಅಪ್ಲೈಯನ್ಸ್(Unilet Appliances) ಮಳಿಗೆಯ ಶೆಟರ್‌ನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು 31.95 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ಹೊಸ ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ.
ರಾತ್ರಿ ಮಳಿಗೆಗೆ ಬೀಗ ಹಾಕಿ ಸಿಬ್ಬಂದಿ ತೆರಳಿದ್ದರು. ಮರುದಿನ ಬೆಳಗ್ಗೆ ಸಿಬ್ಬಂದಿ ಕೆಲಸಕ್ಕೆ ಬಂದಾಗ ಶೆಟರ್‌ನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಒಳಗೆ ಹೋಗಿ ಪರಿಶೀಲಿಸಿದಾಗ ಮಾರಾಟಕ್ಕೆಂದು ಜೋಡಿಸಿದ್ದ ಹೊಸ ಮೊಬೈಲ್‌ಗಳ ಬಾಕ್ಸ್(New mobile phone box)ಗಳ ಕವರ್‌ಗಳನ್ನು ಕೆಳಗೆ ಬಿಸಾಡಿ, ಫೋನ್‌ಗಳು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
20,28,900 ರೂ. ಮೌಲ್ಯದ ಐಫೋನ್ 17, 17 ಪ್ರೊ, 17 ಪ್ರೊ ಮ್ಯಾಕ್ಸ್, 16 ಹಾಗೂ 15 ಮಾಡೆಲ್‌ಗಳ ಒಟ್ಟು 20 ಐಫೋನ್‌ಗಳು, 7,72,980 ರೂ. ಮೌಲ್ಯದ ಒಪ್ರೊ ರೆನೋ 15 ಪ್ರೋ, ರೆನೋ 16 ಹಾಗೂ ಎಫ್ 33 ಸರಣಿಯ 12 ಮೊಬೈಲ್‌ಗಳು, 3,94,983 ರೂ. ಮೌಲ್ಯದ ವಿವೋ 70 ಹಾಗೂ ವಿವೋ 70ಎಫ್‌ಇ ಸೇರಿ ವಿವಿಧ ಮಾಡೆಲ್‌ಗಳ 8 ಮೊಬೈಲ್‌ಗಳು ಕಳ್ಳತನ ಆಗಿದ್ದು, ಕೋಟೆ ಪೊಲೀಸ್ ಠಾಣೆ(Kote Police Station)ಯಲ್ಲಿ ಪ್ರಕರಣ ದಾಖಲಾಗಿದೆ.