ತುಂಗಾನದಿಗೆ ಹಾರಲು ಯತ್ನಿಸಿದ್ದ ಅಪ್ರಾಪ್ತನನ್ನು ಇಆರ್‌ಎಸ್‌ಎಸ್ ವಾಹನದ ಸಿಬ್ಬಂದಿ ರಕ್ಷಣೆ ಮಾಡಿದರು. 
ಶಿವಮೊಗ್ಗ

ತುಂಗಾ ನದಿಗೆ ಹಾರಲು ಯತ್ನಿಸಿದ್ದ ಅಪ್ರಾಪ್ತನ ರಕ್ಷಣೆ | ERSS Police

ಪ್ರಮುಖ ಮುಖ್ಯಾಂಶಗಳು

  • ಪಾಲಕರು ಭೇದ ಭಾವ ಮಾಡುತ್ತಿದ್ದಾರೆಂದು ಮನನೊಂದು ನದಿಗೆ ಹಾರಲು ಯತ್ನ
  • ಊರುಗಡೂರು ವೃತ್ತದಲ್ಲಿ ಗಸ್ತಿನಲ್ಲಿದ್ದ ಇಆಎಸ್‌ಎಸ್ ಪೊಲೀಸರು
  • ಸಾರ್ವಜನಿಕರ ಸಹಾಯದಿಂದ ಬಾಲಕನ ರಕ್ಷಣೆ
ಶಿವಮೊಗ್ಗ: ಮನೆಯಲ್ಲಿ ಪಾಲಕರು ಸಹೋದರರ ನಡುವೆ ಭೇದ ಭಾವ ಮಾಡುತ್ತಿದ್ದಾರೆಂದು ಮನನೊಂದು ವಾದಿ ಎ ಹುದಾ ಸೇತುವೆ ಮೇಲಿಂದ ತುಂಗಾ ನದಿಗೆ ಹಾರಲು ಯತ್ನಿಸಿದ್ದ ಅಪ್ರಾಪ್ತನನ್ನು ಇಆರ್‌ಎಸ್‌ಎಸ್ ಪೊಲೀಸರು(ERSS Police) ರಕ್ಷಣೆ ಮಾಡಿದ್ದಾರೆ.
16 ವರ್ಷದ ಅಪ್ರಾಪ್ತ ಆತ್ಮಹತ್ಯೆ(Suicide)ಗೆ ಯತ್ನಿಸಿದವ. ಮನೆಯಲ್ಲಿ ಪಾಲಕರು ತನಗೆ ಮತ್ತು ತನ್ನ ತಮ್ಮನಿಗೆ ಬೇಧಭಾವ ಮಾಡುತ್ತಿದ್ದಾರೆ ಎಂದು ದೂರಿದ್ದಾನೆ. ಇದೇ ವಿಚಾರವಾಗಿ ಮನನೊಂದಿದ್ದ ಆತ ತುಂಗಾನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಗರದ ಹೊರವಲಯದ ಊರುಗಡೂರು ವೃತ್ತದಲ್ಲಿ ಗಸ್ತಿನಲ್ಲಿದ್ದ ಇಆಎಸ್‌ಎಸ್ ವಾಹನದ ರೆಸ್ಪಾಂಡರ್(Responder) ಶಬ್ಬೀರ್ ಬೇಗ್(ತುಂಗಾನಗರ ಠಾಣೆ ಪೇದೆ) ಹಾಗೂ ವಾಹನದ ಚಾಲಕ ಮಂಜುನಾಥ್ (ಡಿಎಆರ್ ಎಎಚ್‌ಸಿ) ಕೂಡಲೇ ಸ್ಥಳಕ್ಕೆ ಹೋಗಿ ಸಾರ್ವಜನಿಕರ ಸಹಾಯದಿಂದ ಬಾಲಕನ್ನು ರಕ್ಷಿಸಿದ್ದಾರೆ. ಬಳಿಕ ಆತನ ಮನವೊಲಿಸಿ ಪಾಲಕರನ್ನು ಕರೆಸಿ ಅವರೊಂದಿಗೆ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.