ಕೆ.ಎಸ್.ಈಶ್ವರಪ್ಪ , ಮಾಜಿ ಡಿಸಿಎಂ
- ಹಿಂದೂ ಧರ್ಮ ಟೀಕಿಸುವುದು ನಿಲ್ಲಿಸಿ
- ಎಲ್ಲ ಧರ್ಮಗಳ ಬಗ್ಗೆ ಇರಲಿ ಗೌರವ
- ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅನಿಸಿಕೆ
ಶಿವಮೊಗ್ಗ: ಜನಪ್ರತಿನಿಧಿಯಾದವರು ಎಲ್ಲ ಧರ್ಮಗಳನ್ನು ಒಂದೇ ದೃಷ್ಟಿಯಿಂದ ಕಾಣಬೇಕು. ಧರ್ಮದ ವಿಚಾರದಲ್ಲಿ ಜನರ ಮನಸ್ಸಿಗೆ ನೋವುಂಟು ಮಾಡಬಾರದು. ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣರಾಗಬಾರದು. ಸಚಿವ (minister) ಬಸವರಾಜ (basavaraja) ರಾಯರಡ್ಡಿ ಮುಸ್ಲಿಂ ಧರ್ಮವೇ ಶ್ರೇಷ್ಠ ಎಂದಿರುವುದು ಗಂಭೀರ ವಿಚಾರ. ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು (complaint) ದಾಖಲಿಸಿಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಮಠಗಳಿಗೆ ಜಾಸ್ತಿ ಹೋಗಬಾರದು. ನಾನು ಹೋಗುವುದಿಲ್ಲ ಎಂದಿರುವ ಸಚಿವ ರಾಯರಡ್ಡಿ, ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳಿರುವುದರಿಂದ ಹಿಂದೂ ಸಮಾಜದ ಭಾವನೆಗಳಿಗೆ ನೋವುಂಟಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ಸಂಸ್ಕೃತಿಯಲ್ಲಿ ಮಠ-ಮಂದಿರಗಳಿಗೆ ತೆರಳುವುದನ್ನು ಧಾರ್ಮಿಕ, ಸಾಂಸ್ಕೃತಿಕ ಆಚರಣೆಯಾಗಿ ಪರಿಗಣಿಸಲಾಗುತ್ತದೆ. ಇಂತಹ ಆಚರಣೆಗಳನ್ನು ಟೀಕಿಸುವುದು ಸರಿಯಲ್ಲ. ಬಸವರಾಜ ರಾಯರಡ್ಡಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳುಹಿಸಬೇಕು. ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಕೂಗಿದಾಗ ಪ್ರಕರಣ ದಾಖಲಿಸುವ ಸರ್ಕಾರ, ಒಂದು ಧರ್ಮದ ಭಾವನೆಗಳಿಗೆ ನೋವಾಗುವ ರೀತಿ ಹೇಳಿಕೆ ನೀಡಿದಾಗ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದರು.
ಧರ್ಮದ ವಿಚಾರದಲ್ಲಿ ಪದೇಪದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ಹಿಂದೂ ಧರ್ಮ ಟೀಕಿಸುವುದು ಮುಂದುವರಿದರೆ ಯುವಜನರು ಪ್ರತಿಕ್ರಿಯಿಸುವ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಎಚ್ಚರಿಸಿದರು.
ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಮೋಹನ್ ಜಾಧವ್, ಸ.ನಾ.ಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.