ವಡ್ಡರಹಟ್ಟಿಯ ಹನುಮಂತಪ್ಪಗೆ ರಾಜಸ್ವ ನಿರೀಕ ರಾಜು ವೃದ್ಧಾಪ್ಯ ವೇತನದ ಆದೇಶ ಪತ್ರ ವಿತರಿಸಿದರು.
- ವೃದ್ಧಾಪ್ಯ ವೇತನ ಸಮಸ್ಯೆ ಬಗೆಹರಿಸಿದ ಸಚಿವ
- ವಡ್ಡರಹಟ್ಟಿಯಲ್ಲಿ ಘಟನೆ
- ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು
ಹೊಳೆಹೊನ್ನೂರು: ವೃದ್ಧಾಪ್ಯ ವೇತನ ಸಿಗದೆ ಸಮಸ್ಯೆಗೆ ಸಿಲುಕಿದ್ದವರ ಸಮಸ್ಯೆ ಆಲಿಸಿದ ಸಚಿವ ಮಧು ಬಂಗಾರಪ್ಪ, ಸಮಸ್ಯೆ ಬಗೆಹರಿಸಿ ಅರ್ಹರಿಗೆ ಸೌಲಭ್ಯ ವಿತರಿಸಿರುವ ಘಟನೆ ವಡ್ಡರಹಟ್ಟಿಯಲ್ಲಿ ನಡೆದಿದೆ.
ವಡ್ಡರಹಟ್ಟಿ ನಿವಾಸಿ ಹನುಮಂತಪ್ಪ ಎಂಬುವವರು ಕಳೆದ ಎರಡು ವರ್ಷಗಳಿಂದ ಸರ್ಕಾರದ ಸೌಲಭ್ಯ ಸಿಗದೆ ಪರದಾಡುತ್ತಿದ್ದರು. ಇವರ ಹೆಸರಿನಲ್ಲೇ ಮತ್ತೊಬ್ಬರು ಸೌಲಭ್ಯ ಪಡೆಯುತ್ತಿದ್ದಾರೆಂದು ಆರೋಪ ಮಾಡಲಾಗಿತ್ತು. ತಾಂತ್ರಿಕ ದೋಷದಿಂದಾಗಿ ಇವರ ವೃದ್ಧಾಪ್ಯ ವೇತನ ಸ್ಥಗಿತಗೊಂಡಿತ್ತು. ಈ ಬಗ್ಗೆ ಹನುಮಂತಪ್ಪ ಹಲವು ಬಾರಿ ಕಂದಾಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.
ಕಳೆದ ವಾರ ಮಧು ಬಂಗಾರಪ್ಪ ಅವರು ಗ್ರಾಮಾಂತರ ವಿಧಾನಸಭಾ ೇತ್ರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಡ್ಡರಹಟ್ಟಿಗೆ ಹೋದಾಗ ಸ್ಥಳಿಯರು ವಿಷಯ ತಿಳಿಸಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು ತಣವೇ ಸಮಸ್ಯೆ ಬಗೆಹರಿಸಿ ವರದಿ ನೀಡುವಂತೆ ಹೇಳಿದರು.
ಸಚಿವರ ಸೂಚನೆ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು, ಹನುಮಂತಪ್ಪ ಅವರ ದಾಖಲೆಗಳನ್ನು ಪರಿಶೀಲಿಸಿ ಶುಕ್ರವಾರದಂದು ತಾಂತ್ರಿಕ ದೋಷ ಸರಿಪಡಿಸಿ ಹನುಮಂತಪ್ಪಗೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.