ಶಿವಮೊಗ್ಗ ತುಂಗಾನಗರ ಠಾಣೆ. 
ಶಿವಮೊಗ್ಗ

ವೈದ್ಯ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಯಿಂದ ದಾಳಿ | Medical student

ಪ್ರಮುಖ ಮುಖ್ಯಾಂಶಗಳು

  • ಪುರದಾಳು ರಸ್ತೆಯಲ್ಲಿ ಸ್ನೇಹಿತೆಯರಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ
  • ಕಾರಿನ ಡ್ರೈವರ್ ಸೈಡ್ ಗ್ಲಾಸ್ ಅನ್ನು ಕೋಲಿನಿಂದ ಹೊಡೆದ ಅಪರಿಚಿತ
  • ಬೆದರಿಕೆ ಹಾಕಿ 1.40 ಲಕ್ಷ ರೂ. ಮೌಲ್ಯದ ಬಂಗಾರದ ಸರ ಕಿತ್ತು ಪರಾರಿ
ಶಿವಮೊಗ್ಗ: ಪುರದಾಳು ರಸ್ತೆ(Puradalu Road)ಯಲ್ಲಿ ಸ್ನೇಹಿತೆಯರಿಗಾಗಿ ಕಾರು ನಿಲ್ಲಿಸಿ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ದಾಳಿ ನಡೆಸಿ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. 
ದಂತ ವೈದ್ಯಕೀಯ ಕೋರ್ಸ್ ವಿದ್ಯಾರ್ಥಿನಿ(Dental student) ತನ್ನ ಸ್ನೇಹಿತೆಯರೊಂದಿಗೆ ಪುರದಾಳು ಡ್ಯಾಂ ಕಡೆಗೆ ತೆರಳುತ್ತಿದ್ದರು. ಸ್ನೇಹಿತೆಯರು ಸ್ಕೂಟಿಯಲ್ಲಿ ಹಿಂದೆ ಬರುತ್ತಿದ್ದರು. ಅವರು ಬರುವವರೆಗೆ ಕಾಯಲು ವಿದ್ಯಾರ್ಥಿನಿ ರಸ್ತೆ ಬದಿ ಕಾರು ನಿಲ್ಲಿಸಿದ್ದರು. 
ಈ ವೇಳೆ ಅಪರಿಚಿತನೊಬ್ಬ ಕಾರಿನ ಡ್ರೈವರ್ ಸೈಡ್ ಗ್ಲಾಸ್ ಅನ್ನು ಕೋಲಿನಿಂದ ಹೊಡೆದು, ಅದೇ ಕೋಲಿನಿಂದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಅವರ ಕುತ್ತಿಗೆಯಲ್ಲಿದ್ದ 1.40 ಲಕ್ಷ ರೂ. ಮೌಲ್ಯದ 15 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ತುಂಗಾನಗರ ಠಾಣೆ(Tunganagar Station)ಯಲ್ಲಿ ಪ್ರಕರಣ ದಾಖಲಾಗಿದೆ.