ಶಿಕಾರಿಪುರದ ದೊಡ್ಡಪೇಟೆಯ ಅಂಗನವಾಡಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪ್ರವೀಣ್‌ಕುಮಾರ್, ವಿಜಯಾ, ಜಿ.ಸುಮಾ, ಶ್ವೇತಾ, ಜನನಿ ಇತರರಿದ್ದರು.
ಶಿಕಾರಿಪುರ: ಪಲ್ಸ್ ಪೋಲಿಯೋ ಅಭಿಯಾನ ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು ಎಂದು ಬಾಲ ವಿಕಾಸ ಸಮಿತಿ ಸದಸ್ಯ ಪ್ರವೀಣ್‌ಕುಮಾರ್ ಹೇಳಿದರು.
ದೊಡ್ಡಪೇಟೆಯ ಶ್ರೀ ಸಿದ್ದಲಿಂಗೇಶ್ವರ ಶಾಲೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ತಿಳಿಸಿದರು.
ಅಂಗನವಾಡಿ ಶಿಕ್ಷಕಿ ವಿಜಯಾ ಮಾತನಾಡಿ, ಪೋಲಿಯೋ ಸೋಂಕು ಬಾರದಂತೆ ತಡೆಗಟ್ಟಲು ಪ್ರತಿ ವರ್ಷ ಎರಡು ಹಂತದಲ್ಲಿ ಪೋಲಿಯೋ ಲಸಿಕೆ ಅಭಿಯಾನ ನಡೆಸಲಾಗುತ್ತದೆ ಎಂದರು. ನೂರಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಯಿತು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಜಿ.ಸುಮಾ, ಅಂಗನವಾಡಿ ಸಹಾಯಕಿ ಶ್ವೇತಾ, ಜನನಿ ಇತರರಿದ್ದರು.