ಆಗರದಹಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯ 2002ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಚಂದ್ರಶೇಖರ್, ಮಂಜುನಾಥ್, ಪುಷ್ಪಲತಾ, ಸಿದ್ದೇಶ್ವರಪ್ಪ, ಮಲ್ಲೇಶಪ್ಪ ಇತರರಿದ್ದರು. 
ಶಿವಮೊಗ್ಗ

ಗುರು-ಶಿಷ್ಯರ ಸಂಬಂಧ ನಿರಂತರವಾಗಿರಲಿ | Guruvandana

ಶಿವಕುಮಾರ ಎಸ್.ಪಿ.
ಹೊಳೆಹೊನ್ನೂರು: ಹತ್ತಾರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳನ್ನು ಒಟ್ಟಾಗಿ ಸೇರಿಸುವುದು ಸುಲಭದ ಕೆಲಸವಲ್ಲ. ಹಳೆಯ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಕೊಂಟಕಟ್ಟಿ ನಿಂತರೆ ಮುಂಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಶಾಲಾ ಸಮಿತಿ ಅಧ್ಯಕ್ಷ ಎಂ.ಎಸ್.ಚಂದ್ರಶೇಖರ್ ಹೇಳಿದರು.
ಸಮೀಪದ ಆಗರದಹಳ್ಳಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ 2002ನೇ ಸಾಲಿನ ಹತ್ತನೇ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರು-ಶಿಷ್ಯರ ನಡುವಿನ ಸುಮಧುರ ಬಾಂಧವ್ಯ ಮುಂದುವರಿಯಬೇಕು. ಕಲಿಸಿದ ಗುರುಗಳನ್ನು ಕೊನೆವರೆಗೂ ನೆನಪಿಟ್ಟು ಕೊಳ್ಳಬೇಕು. ಶಿಕ್ಷಕರಲ್ಲಿ ಬದ್ಧತೆ ಮುಖ್ಯವಾಗಿರಬೇಕು. ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಿ ಎಂದರು.
ಹಿರಿಯ ಶಿಕ್ಷಕ ದೇವೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಗೌರವ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಂದೆರಡು ದಶಕಗಳ ಕೆಳಗೆ ವಿದ್ಯಾರ್ಥಿಗಳ ಕೊರತೆ ಇರಲಿಲ್ಲ. 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಬ್ಬ ಶಿಕ್ಷಕ ನಿರ್ವಹಣೆ ಮಾಡುತ್ತಿದ್ದರು. ಆಗರದಹಳ್ಳಿಯಲ್ಲಿ ಕ್ರೀಡಾಕೂಟಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತಿತ್ತು. ಬಾಲ್ಯವನ್ನು ನೆನೆಸಿಕೊಂಡಾಗ ಭಾವನಾತ್ಮಕ ಸಂಗತಿಗಳು ಕಣ್ಮುಂದೆ ಬರುತ್ತವೆ ಎಂದರು.
ಮುಖ್ಯ ಶಿಕ್ಷಕ ಮಂಜುನಾಥ್, ವಿಜಯಲಕ್ಷ್ಮೀ, ಶಶಿಕಲಾ, ಮಲ್ಲೇಶಪ್ಪ, ದೇವೇಂದ್ರಪ್ಪ, ರವಿಕುಮಾರ್, ಪುಷ್ಪಲತಾ, ಸಿದ್ದೇಶ್ವರಪ್ಪ, ಮಹೇಶ್ವರಪ್ಪ, ಸದಾನಂದಪ್ಪ, ರವಿಕುಮಾರ್, ಇತರರಿದ್ದರು.