ಸೊರಬಕ್ಕೆ ಆಗಮಿಸಿದ್ದ ಶೃಂಗೇರಿ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಸಂಸದ ಬಿ.ವೈ.ರಾಘವೇಂದ್ರ ಆಶೀರ್ವಾದ ಪಡೆದರು. 
ಶಿವಮೊಗ್ಗ

ಭಕ್ತರ ಸಂಕಷ್ಟಗಳು ದೂರವಾಗಲಿ | Shringeri swamiji

ಸೊರಬ: ಪ್ರಾಚೀನ ಕಾಲದಿಂದಲೂ ಸೊರಬದಲ್ಲಿ ಶ್ರೀ ರಂಗನಾಥನ ಸಾನ್ನಿಧ್ಯವಿದೆ. ಭಗವಂತನ ಅನುಗ್ರಹದಿಂದ ಭಕ್ತರ ಸಂಕಷ್ಟಗಳು ದೂರವಾಗಿ ಸಮೃದ್ಧಿಯ ಜೀವನ ನಡೆಸುವಂತಾಗಲಿ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕು ಬ್ರಾಹ್ಮಣ ಸಮಾಜ ಮತ್ತು ಸೊರಬ ಟೌನ್ ದೈವಜ್ಞ ಬ್ರಾಹ್ಮಣ ಸಮಾಜದಿಂದ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ರಂಗನಾಥನ ಸ್ವಾಮಿ ದೈವಾನುಗ್ರಹದಿಂದ ಭಕ್ತರ ದುಃಖ, ಸಂಕಷ್ಟಗಳು ಪರಿಹಾರವಾಗಿ ನೆಮ್ಮದಿಯ ಜೀವನ ಕಳೆಯುವಂತಾಗಲಿ. ಭಕ್ತರು ನೀಡಿದ ಗುರು ಭಕ್ತಿಗೆ ನಾವು ಸಂತೃಪ್ತವಾಗಿದ್ದೇವೆ. ಭಗವಂತನ ಕರುಣೆಯಿಂದ ಸಂದೇಹಗಳು ದೂರವಾಗಿ ಸಮೃದ್ಧಿಯ ಜೀವನ ನಡೆಸುವಂತಾಗಲಿ ಎಂದರು.
ಜಡೆಯಲ್ಲಿ ಸೋಮವಾರ ಆಯೋಜಿಸಿರುವ ನೂತನ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದರು. ಸಂಸದ ಬಿ.ವೈ.ರಾಘವೇಂದ್ರ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಡಾ. ಜ್ಞಾನೇಶ್, ಗುರುಮೂರ್ತಿ, ಡಾ. ಎಂ.ಕೆ.ಭಟ್, ಕಾಳಿಂಗರಾಜ್, ಮಧುರಾಯ್ ಶೇಟ್, ಪ್ರಸನ್ನ ದೊಡ್ಮನೆ, ಶ್ರೀಕಾಂತ್ ಶೇಟ್, ಹಿರಿಯಣ್ಣ ಕಲ್ಲಂಬಿ, ಹನುಮಂತಪ್ಪ ಇತರರಿದ್ದರು.