ಸಾಗರ ತಾಲೂಕಿನ ಇಡುವಾಣಿ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಡಿಕ್ಕಿಯಾಗಿರುವುದು. 
ಶಿವಮೊಗ್ಗ

ಬಸ್ ಅಪಘಾತದಲ್ಲಿ ಹಲವರಿಗೆ ಗಾಯ | Accident

ತಾಳಗುಪ್ಪ: ಸಾಗರ ತಾಲೂಕಿನ ಇಡುವಾಣಿ ಸಮೀಪ ಗುರುವಾರ ಸರ್ಕಾರಿ ಬಸ್ ಮತ್ತು ಶಾಲಾ ವಾಹನ ನಡುವೆ ಅಪಘಾತ ಉಂಟಾಗಿ ಕೆಲವರಿಗೆ ಸಣ್ಣಪುಟ್ಟ ಗಾಯಗಾಳಗಿವೆ. ಜೋಗ್-ಕಾರ್ಗಲ್ ಕಡೆಯಿಂದ ಸಾಗರದ ಎಲ್ಬಿ ಕಾಲೇಜು ಹಾಗೂ ಪ್ರಗತಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಶಾಲಾ ವಾಹನ ಹಾಗೂ ಸಾಗರದಿಂದ ಕಾರ್ಗಲ್ ಕಡೆ ಹೋಗುತ್ತಿದ್ದ ಸರ್ಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಶಾಲಾ ಬಸ್‌ನಲ್ಲಿ 32 ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. ಈ ಪೈಕಿ 9ನೇ ತರಗತಿ ವಿದ್ಯಾರ್ಥಿ ಸಾತ್ವಿಕ್, ಶಾಲಾ ಬಸ್ ಚಾಲಕ ಪ್ರವೀಣ್, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಆರೀಫ್ ಎಂಬುವವರಿಗೆ ತೀವ್ರ ಪೆಟ್ಟಾಗಿದ್ದು, ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದವರಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.