ಸಾಗರದ ಲಾಲ್​ ಬಹದ್ದೂರ್​ ಕಾಲೇಜಿನ ದೇವರಾಜ್​ ಅರಸು ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್​.ಎಸ್​.ಮಂಜಪ್ಪ ಹೊಸಬಾಳೆ ದಂಪತಿಗೆ ಸನ್ಮಾನಿಸಲಾಯಿತು. ಪ್ರಲ್ಹಾದ ಜೋಶಿ, ಬಿ.ವೈ.ರಾವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಚನ್ನಬಸಪ್ಪ, ಡಿ.ಎಸ್​.ಅರುಣ್​, ಬಿ.ಆರ್​.ಜಯಂತ್​, ವ.ಶಂ.ರಾಮಚಂದ್ರಭಟ್​, ಪ್ರಸನ್ನ ಕೆರೆಕೈ, ಕೆ.ಎಂ.ಸೂರ್ಯನಾರಾಯಣ ಇತರರಿದ್ದರು.  
ಶಿವಮೊಗ್ಗ

ಅಡಿಕೆ ಕ್ಷೇತ್ರದ ಪ್ರಗತಿಗೆ ಮಂಜಪ್ಪ ಸೇವೆ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ಎಚ್​.ಎಸ್​.ಮಂಜಪ್ಪ ಹೊಸಬಾಳೆ ಅವರಿಗೆ ಸನ್ಮಾನ
  • ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶ್ಲಾಘನೆ
  • ಅಡಿಕೆ ಕ್ಷೇತ್ರದ ಪ್ರಗತಿಗೆ ಮಂಜಪ್ಪ ಸೇವೆ ಅನನ್ಯ
ಸಾಗರ: ಮನುಷ್ಯ ಉನ್ನತ ಮಟ್ಟಕ್ಕೆ ಏರುತ್ತಿದ್ದಂತೆ ಸ್ವಾರ್ಥ ಹೆಚ್ಚಾಗುತ್ತದೆ. ರಾಜಕಾರಣದಲ್ಲಂತೂ ಇದನ್ನು ನಾವು ಹೆಚ್ಚಾಗಿ ಕಾಣುತ್ತಿದ್ದೇವೆ. ಆದರೆ ಹೊಸಬಾಳೆಯ ಎಚ್​.ಎಸ್​.ಮಂಜಪ್ಪ ಬಹಳ ವರ್ಷಗಳಿಂದ ದೆಹಲಿಗೆ ಸಂಪರ್ಕವಿದ್ದರೂ ಎಂದೂ ತಮ್ಮ ಶಿಫಾರಸ್ಸುಗಳನ್ನು ವೈಯಕ್ತಿಕವಾಗಿ ಬಳಸಿಕೊಂಡವರಲ್ಲ. ನಾನು ಹಲವಾರು ವರ್ಷಗಳಿಂದ ಅವರನ್ನು ಬಲ್ಲೆ. ಅವರ ಬದುಕು ಆದರ್ಶವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಾಗರದ ಲಾಲ್​ ಬಹದ್ದೂರ್​ ಕಾಲೇಜಿನ ದೇವರಾಜ್​ ಅರಸು ಕಲಾಮಂದಿರದಲ್ಲಿ ಶನಿವಾರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂದಿಂದ ಹಿರಿಯ ಸಹಕಾರಿ ಎಚ್​.ಎಸ್​.ಮಂಜಪ್ಪ ಹೊಸಬಾಳೆ ಅವರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಂಜಪ್ಪರನ್ನು ಅಭಿನಂದಿಸಿ ಮಾತನಾಡಿದರು.
ಮಂಜಪ್ಪ ಪ್ರಾಮಾಣಿಕ ಗೃಹಸ್ಥನಾಗಿ ಕುಟುಂಬದ ಜೀವನವನ್ನು ಮಾದರಿಯಾಗಿ ನಡೆಸಿ ತೋರಿಸಿದ್ದಾರೆ. ಅವರು ದೆಹಲಿಗೆ ಬಂದಾಗಲೆಲ್ಲ ಅಡಿಕೆ ಬೆಳೆ ಕುರಿತ ಸಮಸ್ಯೆ, ಬೆಳೆಗಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅಂಕಿಅಂಶ ಸಹಿತ ಮನವಿ ಹಿಡಿದು ನಿಯೋಗ ತಂದು ಅದೊಂದು ತಾರ್ಕಿಕ ಅಂತ್ಯ ಮುಟ್ಟುವವರೆಗೂ ಬಿಡುತ್ತಿರಲಿಲ್ಲ. ಅಡಿಕೆ ಬೆಳೆ ೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಇವತ್ತಿನ ಈ ಕಾರ್ಯಕ್ರಮದಲ್ಲಿ ಜನರ ಪ್ರೀತಿ, ಔದಾರ್ಯವಾಗಿ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.
ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾಗಿದೆ. ತುಂಬಾ ಮುಖ್ಯವಾಗಿ ಹವಾಮಾನ ಬೆಳೆ ಆಧಾರಿತ ಬೆಳೆ ವಿಮೆಯ ಹಣ ಬಂದಿಲ್ಲ ಎಂದು ಹೇಳುತ್ತಿದ್ದೀರಿ. ಇದಕ್ಕೆ ರಾಜ್ಯ ಸರ್ಕಾರ ಸರಿಯಾದ ಅಂಕಿ ಅಂಶ ನೀಡಬೇಕು. ಈ ನಿಟ್ಟಿನಲ್ಲಿ ಕೂಡಲೇ ಗಮನ ಹರಿಸಲಾಗುವುದು. ಹಿಂದಿನ ಕೇಂದ್ರ ಸರ್ಕಾರ ಅಡಿಕೆಯನ್ನು ಕ್ಯಾನ್ಸರ್​ಕಾರಕ ಎಂದು ಅಫಿಡವೀಟ್​ ಸಲ್ಲಿಸಿದೆ. ಆದರೆ ನಮ್ಮ ಸರ್ಕಾರ ಬಂದ ಮೇಲೆ ಅಡಿಕೆಯಲ್ಲಿ ಔಷಧೀಯ ಗುಣವಿದ್ದು ಹಾನಿಕಾರಕ ಎನ್ನುವ ಹಣೆಪಟ್ಟಿ ತೆಗೆಯುವ ಪ್ರಯತ್ನ ನಡೆಸುತ್ತಿದ್ದೇವೆ. ಅದು ಶ್ರೀದಲ್ಲಿಯೇ ನೆರವೇರುತ್ತದೆ ಎಂದರು.
ಕೆಲವರು ಅಡಿಕೆಗೆ ರಾಸಾಯನಿಕ ಬಣ್ಣ ಬಳಸಿ ಅಡಿಕೆ ತಿನ್ನುವ ಜನರ ಆರೋಗ್ಯ ಹಾಳು ಮಾಡುತ್ತಿದು, ಅಂತಹವರ ಬಗ್ಗೆ ಜಾಗೃತೆ ವಹಿಸಬೇಕಾಗಿದೆ. ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳನ್ನು ತಡೆಹಿಡಿದಿರುವ ಬಗ್ಗೆ ನನಗೆ ಈಗ ತಿಳಿದಿದೆ. ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್​ ಜತೆ ಮಾತುಕತೆ ನಡೆಸಲಾಗುತ್ತದೆ. ಜೂ.19ಕ್ಕೆ ದೆಹಲಿಯಲ್ಲಿ ಪಡ್ನಾವಿಸ್​ ಜತೆ ಸಭೆ ಇದ್ದು ಈ ಸಂದರ್ಭದಲ್ಲಿ ಕಾಗೇರಿ, ರಾವೇಂದ್ರ, ಆರಗ ಾನೇಂದ್ರ ಹಾಗೂ ಬೆಳೆಗಾರ ಪ್ರಮುಖರ ಜತೆ ಪಡ್ನವಿಸ್​ ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ವಿಶ್ವ ವಾಣಿಜ್ಯ ಒಪ್ಪಂದದ ನಡುವೆಯೂ ಭಾರತಕ್ಕೆ ಆಮದಾಗುತ್ತಿರುವ ಅಡಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.
ಸೌರಶಕ್ತಿ ಬಳಸಿಕೊಳ್ಳುವಲ್ಲಿ ನಮ್ಮ ಸರ್ಕಾರ ದಿಟ್ಟಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರಮೋದಿ ಅವರು ದೇಶದ ಗಡಿಗಳನ್ನು ಗಟ್ಟಿಗೊಳಿಸುವಲ್ಲಿ ಸಹ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅದರಲ್ಲಿಯೂ ಕಳೆದ ಎರಡೂವರೆ ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಗಡಿ ಸಮಸ್ಯೆಗಳಿತ್ತು. ಅದನ್ನು ವ್ಯವಸ್ಥಿತವಾಗಿ ಸರಿಪಡಿಸಿ ಭದ್ರಗೊಳಿಸಲಾಗಿದೆ. ಅಡಿಕೆ ಕೇವಲ ತಿನ್ನುವುದಕ್ಕಲ್ಲ. ಅದನ್ನು ಪೂಜೆಗೂ ಬಳಸುತ್ತೇವೆ. ಸಾಂಪ್ರದಾಯಿಕ ಹಲವು ಕಾರ್ಯಕ್ರಮದಲ್ಲಿ ಅಡಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಮಲೆನಾಡಿನ ಜನ ಪರಿಸರಪ್ರಿಯರು. ಗಿಡಗಳಿಗೆ ತೊಂದರೆ ಆಯಿತೆಂದರೆ ದು@ಖಿಸುವವರಿದ್ದಾರೆ. ಅಂತಹದರಲ್ಲಿ ತಿನ್ನುವ ಅಡಿಕೆಯೇ ಇಂದು ಕಲಬೆರಕೆಯಾಗುತ್ತಿದೆ. ಅದರಲ್ಲಿಯೂ ಕೆಂಪಡಿಕೆಗೆ ಹಾನಿಕಾರಕ ಬಣ್ಣ ಬಳಸಲಾಗುತ್ತಿದೆ ಎನ್ನುವ ದೂರು ಹೆಚ್ಚು ಕೇಳಿಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಬೆಳೆಗಾರರು ಸಿದ್ಧರಾಗಬೇಕು. ಇಲ್ಲವಾದಲ್ಲಿ ಭಾರೀ ಅಪಾಯ ಮತ್ತು ಆತಂಕಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಅಡಿಕೆ ಬೆಳೆಗಾರರ ಸಂದ ಅಧ್ಯ ವ.ಶಂ.ರಾಮಚಂದ್ರ ಭಟ್​, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರಗ ಾನೇಂದ್ರ, ಚನ್ನಬಸಪ್ಪ, ವಿಧಾನ ಪರಿಷತ್​ ಸದಸ್ಯ ಡಿ.ಎಸ್​.ಅರುಣ್​, ಪ್ರಮುಖರಾದ ಕೆ.ಎಂ.ಸೂರ್ಯನಾರಾಯಣ, ಇಂದೂಧರ ಬೇಸೂರು, ಎಸ್​.ಆರ್​.ಸತೀಶ್ಚಂದ್ರ, ಅಂಡಿಗೆ ಅಶೋಕ ನಾಯ್ಕ್​, ಮಹೇಶ್​ ಹುಲ್ಕುಳಿ, ಎಚ್​.ಎಸ್​.ಶಿವಕುಮಾರ್​, ಗೋಪಾಲಕೃಷ್ಣ ವೈದ್ಯ, ಆರ್​.ಎಂ.ಹೆಗಡೆ, ಜಿ.ಟಿ.ಹೆಗಡೆ, ಪ್ರಸನ್ನ ಕೆರೆಕೈ, ಬಿ.ಕೆ.ಶಿವಕುಮಾರ್​, ಎಚ್​.ಎಸ್​.ಷಡಾರಿ, ಎಂ.ಹರನಾಥರಾವ್​ ಮತ್ತಿಕೊಪ್ಪ, ಬಿ.ಆರ್​.ಜಯಂತ್​, ಶಂಭುಲಿಂಗ ಗಣಪತಿ ಹೆಗಡೆ, ಲೋಕನಾಥ ಬಿಳಿಸಿರಿ, ನಾಗರಾಜ ಶೆಟ್ಟಿ, ಶಿವಶಂಕರ್​, ಪಟ್ಟಾಭಿರಾಮ್​, ರವಿಕುಮಾರ್​ ಇತರರಿದ್ದರು.
ಅಡಿಕೆ ಬೆಳೆಗಾರರ ಆಪದ್ಬಾಂದವ
ಅಡಿಕೆ ಬೆಳೆ ಮತ್ತು ಬೆಳೆಗಾರರಿಗೆ ಸಮಸ್ಯೆ ಎದುರಾದಾಗಲೆಲ್ಲ ಎಚ್​.ಎಸ್​.ಮಂಜಪ್ಪ ಆಪದ್ಬಾಂದವರಾಗಿ ನಿಲ್ಲುತ್ತಿದ್ದರು ಎಂದು ಶಾಸಕ ಅರಗ ಾನೇಂದ್ರ ಅಭಿನಂದನಾ ನುಡಿ ನುಡಿದರು.
1996ರಲ್ಲಿ ಶಿವಮೊಗ್ಗದಲ್ಲಿ ಬೃಹತ್​ ಸಮಾವೇಶ ನಡೆಸಿ ಜಾರ್ಜ್​ ಫರ್ನಾಂಡಿಸ್​ ಅವರನ್ನು ಕರೆಸಿ ಅಡಿಕೆ ಬೆಳೆಗಾರರ ಪರವಾಗಿ ಸರ್ಕಾರ ನೋಡುವಂತೆ ಮಾಡಿದ ಕೀರ್ತಿ ಮಂಜಪ್ಪ ಅವರಿಗೆ ಸಲ್ಲುತ್ತದೆ. ಇಂದು ಅಡಿಕೆ ಬೆಳೆ ಸ್ಥಿರತೆ ಕಾಯ್ದುಕೊಂಡಿದೆ ಎಂದರೆ ಅದರ ಹಿಂದೆ ಮಂಜಪ್ಪ ಅವರ ಶ್ರಮವಿದೆ. ಕೇಂದ್ರದಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಉನ್ನತ ಸಚಿವರು ನಿಲ್ಲುತ್ತಿದ್ದುದರ ಹಿಂದೆ ಮಂಜಪ್ಪ ಅವರ ಪ್ರಭಾವ ಇದೆ. ಸದಾ ಬೆಳೆಗಾರರ ಹಿತಚಿಂತನೆ ಮಾಡಿದ ಎಚ್​.ಎಸ್​.ಮಂಜಪ್ಪ ಅವರನ್ನು ಗೌರವಿಸುವ ಮೂಲಕ ನಮ್ಮ ಸಣ್ಣ ಕೃತತೆ ಸಲ್ಲಿಸಿದಂತೆ ಆಗಿದೆ ಎಂದರು.
ಅಡಿಕೆ ಬೆಳೆ ಮತ್ತು ಬೆಳೆಗಾರರ ಪರವಾಗಿ ನಾನು ನಿಲ್ಲುವುದು ನನ್ನ ಬದ್ಧತೆಯಾಗಿತ್ತು. ಮಲೆನಾಡು ಭಾಗದ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಸೂಕ್ತ ಸ್ಥಾನಮಾನ ಸಿಗಬೇಕು ಎನ್ನುವ ಒತ್ತಾಯ ಯಾವಾಗಲೂ ಇರುತ್ತದೆ. ನನಗೆ ಅನೇಕ ಸನ್ಮಾನಗಳು ಸಂದಿದ್ದರೂ ಇವತ್ತಿನ ಸನ್ಮಾನ ನನಗೆ ತುಂಬಾ ಸಂತೋಷ ತಂದಿದೆ. ಇದು ನಾನೊಬ್ಬನೇ ಮಾಡಿದ ಸಾಧನೆಯಲ್ಲ. ಮಲೆನಾಡಿನ ಅಡಿಕೆ ಬೆಳೆಗಾರರು ನನ್ನ ಈ ಕಾಯಕದ ಜತೆಯಲ್ಲಿ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಆ ಎಲ್ಲ ವಿಚಾರಗಳನ್ನೂ ಪುಸ್ತಕದ ಮೂಲಕ ತೆರೆದಿಡುವ ಅಭಿಲಾಷೆ ನನ್ನದು.
> ಎಚ್​.ಎಸ್​.ಮಂಜಪ್ಪ, ಹಿರಿಯ ಸಹಕಾರಿ
ಸಮಾಜಮುಖಿ ಚಿಂತನೆ ಮಾರ್ಗದರ್ಶಿ
ನಮ್ಮ ಮಲೆನಾಡಿನ ಅಡಿಕೆ ಬೆಳೆಗೆ ಸಮಸ್ಯೆ ಆದಾಗೆಲ್ಲ ನಿರಂತರವಾಗಿ ಮಂಜಪ್ಪನವರು ತೊಡಗಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನ್ಯಾಯ ದೊರಕಿಸಿಕೊಡುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರ ಸುದೀರ್ ಸಾಧನೆ ಮತ್ತು ಸಮಾಜಮುಖಿ ಚಿಂತನೆಗಳು ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಿದೆ. ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಭೆಯೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ಲೋಕಸಭಾ ಸದಸ್ಯ ಬಿ.ವೈ.ರಾವೇಂದ್ರ ತಿಳಿಸಿದರು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುಕೂಲತೆ ಒದಗಿಸಿದ ಅನಂತಕುಮಾರ್​ ಸಹಕಾರವನ್ನು ರಾಜ್ಯದ ಜನತೆ ಎಂದಿಗೂ ಮರೆಯುವಂತಿಲ್ಲ. ಇದೀಗ ಆ ಸ್ಥಾನವನ್ನು ಪ್ರಲ್ಹಾದ ಜೋಶಿಯವರು ತುಂಬಿದ್ದಾರೆ. ನಿರಂತರವಾಗಿ ರಾಜ್ಯಕ್ಕೆ ಬರಬೇಕಾದ ಅನುದಾನ, ಸಹಕಾರ ಕೊಡಿಸಿಕೊಡುವಲ್ಲಿ ಅವರ ಪಾತ್ರ ಬಹುದೊಡ್ಡದು ಎಂದರು.