ಹೊಸನಗರ ತಾಲೂಕಿನ ಮಾಣಿಗದ್ದೆ-ಜಗನಕೊಪ್ಪ ರಸ್ತೆಗೆ ಮಣ್ಣು ಜರಿದಿರುವುದು. 
ಶಿವಮೊಗ್ಗ

ಮಾಣಿಗದ್ದೆ ರಸ್ತೆಗೆ ಜರಿದ ಮಣ್ಣು | rain effect

ಶಿವಕುಮಾರ ಎಸ್.ಪಿ.
ಹೊಸನಗರ: ನಗರ ಹೋಬಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಡೂರು ಕೊಳವಾಡಿ ಗ್ರಾಮದ ಮಾಣಿಗದ್ದೆ-ಜಗನಕೊಪ್ಪ ರಸ್ತೆಗೆ ಭಾರಿ ಪ್ರಮಾಣದ ಮಣ್ಣು ಜರಿದು ಸಂಪರ್ಕ ಬಂದ್ ಆಗಿದೆ.
ನಗರ ಹೋಬಳಿಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆ ಸುರಿದಿದೆ. ಯಡೂರು, ನಗರ, ಮಾಸ್ತಿಕಟ್ಟೆ, ಹುಲಿಕಲ್, ಚಕ್ರಾ, ಸಾವೇಹಕ್ಲು, ನಿಟ್ಟೂರು, ಅಂಡಗದೋದೂರು ಸೇರಿ ಬಹುತೇಕ ಭಾಗದಲ್ಲಿ ಪ್ರತಿದಿನ 150 ಮಿ.ಮೀ.ಗಿಂತಲೂ ಅಧಿಕ ಮಳೆಯಾಗಿದೆ. ರಾಣೇಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಕಡೆ ಸಂಚಾರಕ್ಕೂ ವ್ಯತ್ಯಯವಾಗಿತ್ತು.
ಬಹುತೇಕ ಅಡಿಕೆ ತೋಟದಲ್ಲಿ ಕೊಳೆರೋಗದಿಂದ ಅಡಿಕೆ ಮಣಿಗಳು ಭಾರಿ ಪ್ರಮಾಣದಲ್ಲಿ ಉದುರಿವೆ. ರೈತರು ಸಂಕಷ್ಟದಲ್ಲಿದ್ದು, ನಗರ ಹೋಬಳಿಗೆ ಮಳೆಹಾನಿಯ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದ್ದಾರೆ.