- 5.50 ಲಕ್ಷ ರೂ. ಪಡೆದು ಮೋಸ ಮಾಡಿದ್ದ ಕೊರ್ಲಿಕೊಪ್ಪ ಗ್ರಾಮದ ವ್ಯಕ್ತಿ
- ಇಂಡಿಹಳ್ಳಿ ಗ್ರಾಮದ ಅಣ್ಣಪ್ಪ ಅವರಿಂದ ಹಣ ಪಡೆದಿದ್ದ ಆರೋಪಿ ಸುರೇಶ್
- ಸೊರಬ ಠಾಣೆ ಪೊಲೀಸರಿಂದ ಬಂಧನ, 5.20 ಲಕ್ಷ ರೂ. ಜಪ್ತಿ
ಶಿವಮೊಗ್ಗ: ಕುರಿ ಶೆಡ್ನಿರ್ಮಿಸಿ ಕೊಡುವುದಾಗಿ ನಂಬಿಸಿ 5.50 ಲಕ್ಷ ರೂ. ಪಡೆದು ಮೋಸ ಮಾಡಿದ್ದ ವ್ಯಕ್ತಿಯನ್ನು ಸೊರಬ ಠಾಣೆ(Soraba Station) ಪೊಲೀಸರು ಬಂಧಿಸಿದ್ದು, ಆತನಿಂದ 5.20 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ಸಾಗರ ತಾಲೂಕಿನ ಕೊರ್ಲಿಕೊಪ್ಪ ಗ್ರಾಮದ ಸುರೇಶ (38) ಬಂಧಿತ ಆರೋಪಿ. ಸೊರಬ ತಾಲೂಕಿನ ಇಂಡಿಹಳ್ಳಿ ಗ್ರಾಮದ ಜೆ.ಅಣ್ಣಪ್ಪ ಅವರಿಂದ ಕುರಿ ಶೆಡ್(Sheep Shed) ನಿರ್ಮಿಸಿಕೊಡುವುದಾಗಿ ಕಳೆದ ಮೇ 26ರಂದು ಆರೋಪಿ ಸುರೇಶ್ ಹಣ ಪಡೆದಿದ್ದ. ಈ ಬಗ್ಗೆ ಅಣ್ಣಪ್ಪ ಅವರು ಸೊರಬ ಠಾಣೆಗೆ ದೂರು ನೀಡಿದ್ದರು.
ಶಿಕಾರಿಪುರ ಡಿವೈಎಸ್‌ಪಿ(Shikaripura DYSP) ಕೆ.ಇ.ಕೇಶವ ನೇತೃತ್ವದಲ್ಲಿ ಸೊರಬ ಸಿಪಿಐ ಮಹಾಂತೇಶ ಲಂಬಿ ಮಾರ್ಗದರ್ಶನದಲ್ಲಿ ಸೊರಬ ಠಾಣೆ ಪಿಎಸ್‌ಐ ಎಂ.ಎಚ್.ನವೀನ್ ಹಾಗೂ ಸಿಬ್ಬಂದಿಗಳಾದ ಎಸ್.ಕೊಟ್ರೇಶಪ್ಪ, ಕೆ.ಎಚ್.ಗಿರೀಶ್, ಎಲ್.ರಾಜುನಾಯ್ಕ, ರಾಘವೇಂದ್ರ, ವಿನಯ್ ಅವರನ್ನೊಳಗೊಂಡ ತಂಡ ಹನಗವಾಡಿ ಗ್ರಾಮ(Hanagawadi Village)ದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.