ರಿಪ್ಪನ್ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಟಾಕಪ್ಪ, ಬಿ.ಎಲ್.ರಾಜು, ಶ್ರೀನಿವಾಸ ಆಚಾರ್ ಇತರರಿದ್ದರು.
- ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ
- ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
- ಪಾಲಕರ ಕನಸನ್ನು ನನಸು ಮಾಡಿ
ರಿಪ್ಪನ್ಪೇಟೆ ಮಕ್ಕಳ ಬಗ್ಗೆ ಪಾಲಕರು ಅಪಾರ ಭರವಸೆ ಹೊಂದಿರುತ್ತಾರೆ. ಅವರ ನಂಬಿಕೆ ಹುಸಿಗೊಳಿಸಬೇಡಿ. ಒಳ್ಳೆಯ ಶಿಕ್ಷಣ ಪಡೆದು ಸುಸಂಸತ ವ್ಯಕ್ತಿತ್ವ ರೂಪಿಸಿಕೊಳ್ಳಿರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸತಿಕ, ಕ್ರೀಡಾ, ರೋವರ್&ರೇಂರ್ಜಸ್, ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಶಿಕ್ಷಣ ಸರ್ಕಾರ ಮತ್ತು ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ನೀವು ಪುಣ್ಯಮಾಡಿದ್ದೀರಿ. ಕುಟುಂಬದ ಕಷ್ಟ&ನಷ್ಟಗಳನ್ನು ನಿಮ್ಮ ಗಮನಕ್ಕೆ ತಾರದೆ ಓದುವಂತೆ ಪಾಲಕರು ಪ್ರೆರೇಪಿಸುತ್ತಿದ್ದಾರೆ. ಅಗತ್ಯಕ್ಕಷ್ಟೆ ಮೊಬೈಲ್ ಬಳಸಿ, ಜೀವನದ ಭವಿಷ್ಯದ ಗುರಿಹೊಂದಿ ವಿದ್ಯೆ ಕಲಿಯಿರಿ. ಪದವಿ ಮುಗಿದ ಯುವಜನರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಯುವನಿಧಿ ಕಲ್ಪಿಸಿದೆ. ಕೆಲಸ ಸಿಗುವವರೆಗೆ ಇದನ್ನು ಬಳಸಿಕೊಂಡು ಮುಂದೊಂದು ದಿನ ಒಳ್ಳೆಯ ಉದ್ಯೋಗಸ್ಥರಾಗಿ ಎಂದು ಹೇಳಿದರು.
ಕಲಾವಿದ ಕಣ್ಣೂರು ಟಾಕಪ್ಪ, ಪ್ರಾಚಾರ್ಯ ಬಿ.ಎಲ್.ರಾಜು, ಸಿಡಿಸಿ ಉಪಾಧ್ಯ ಶ್ರೀನಿವಾಸ ಆಚಾರ್, ಸದಸ್ಯರಾದ ಮಂಜುನಾಥ ಕಾಮತ್, ಫ್ಯಾನ್ಸಿ ರಮೇಶ್, ಪಿಯೂಸ್ ರೋಡ್ರಿಗಸ್, ರು, ಡಾ.ಎಂ.ಕುಮಾರ, ಡಾ. ರಜನಿಕಾಂತ್ ಇತರರಿದ್ದರು.