ಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಮೈತ್ರಿ ಪಾಟೀಲ್, ಎಂ.ದಿನೇಶ್, ರೂಪಾ ರಮೇಶ್ ಇತರರಿದ್ದರು. 
ಶಿವಮೊಗ್ಗ

ಮಹಿಳೆಯರಿಗೆ ಹಕ್ಕುಗಳ ಅರಿವು ಮೂಡಿಸಿ

ಸಾಗರ: ಮಹಿಳೆಯರ ಹಕ್ಕುಗಳ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಬೇಕು ಎಂದು ಶಾಸಕ ಗೋಪಾಲಕೃಷ್ಣಬೇಳೂರು ಸಲಹೆ ನೀಡಿದರು.
ಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಬಂದ ಮೇಲೆ ಮಹಿಳೆಯರು ಆರ್ಥಿಕ ಸಾಕ್ಷರರಾಗುವ ಜತೆಗೆ ದೈನಂದಿನ ವ್ಯವಹಾರದ ಬಗ್ಗೆ ಅರಿವು ಹೊಂದುತ್ತಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳ ಸಂಘ ಮಹಿಳೆಯರ ಜೀವನಶೈಲಿ ಬದಲಾಯಿಸಿದೆ. ಬಹಳಷ್ಟು ಕುಟುಂಬ ಉತ್ತಮವಾಗಿ ಬದುಕಲು ಯೋಜನೆಯ ಮದ್ಯವರ್ಜನ ಶಿಬಿರ ಕಾರಣವಾಗಿದೆ. ಪ್ರತಿ ವರ್ಷ 13 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಆರೋಗ್ಯ ಶಿಬಿರ, ಕೆರೆಗಳ ಕಾಯಕಲ್ಪ, ಮಕ್ಕಳಿಗೆ ಶೈಕ್ಷಣಿಕ ನೆರವು ಕಲ್ಪಿಸುತ್ತಿದೆ ಎಂದರು.
ಯೋಜನೆ ಅಭಿವೃದ್ಧಿ ಸಹಿಸದೆ ಅನೇಕ ಷಡ್ಯಂತ್ರ ಸಹ ನಡೆದಿತ್ತು. ದುಷ್ಟಶಕ್ತಿಗಳ ಪ್ರಯತ್ನ ಫಲಿಸಿಲ್ಲ. ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ಬುರುಡೆ ರಹಸ್ಯ ಬಯಲು ಮಾಡಿದೆ. ವಿಧಾನಸೌಧದಲ್ಲಿ ಧರ್ಮಸ್ಥಳ ಕ್ಷೇತ್ರದ ಪರ ನಾನು ಮಾತನಾಡಿದ್ದೇನೆ. ಧರ್ಮಸ್ಥಳ ಸಂಘ ಶೋಷಣೆ ಇಲ್ಲದೆ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಮೈತ್ರಿ ಪಾಟೀಲ್, ಎಂ.ದಿನೇಶ್, ರೂಪಾ ರಮೇಶ್, ಕಸ್ತೂರಿ ಸಾಗರ್, ಮಧುರಾ ಶಿವಾನಂದ್, ಎಂ.ಸವಿತಾ, ಲೀಲಾವತಿ, ದಯಾನಂದ ಪೂಜಾರಿ, ಗೌರಮ್ಮ ಇತರರಿದ್ದರು.