ಶಿರಾಳಕೊಪ್ಪ ಹತ್ತಿರದ ಜಾವಗಟ್ಟಿ ಗ್ರಾಮದಲ್ಲಿ ದುರ್ಗಮ್ಮ ಎಂಬುವರಿಗೆ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು. ಹನುಮಂತಪ್ಪ ಸ್ವಾಮೀಜಿ, ಎಂ.ದಿನೇಶ್, ಚವೀಶ್ ಜೈನ್, ಶಶಿಕಲಾ ಇತರರಿದ್ದರು. 
ಶಿವಮೊಗ್ಗ

ಕೌಟುಂಬಿಕ ಸಾಮರಸ್ಯ ಕಾಪಾಡಿ | Handing over the house

ಶಿರಾಳಕೊಪ್ಪ: ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜತೆಗೆ ಕೌಟುಂಬಿಕ ಸಾಮರಸ್ಯ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಹೇಳಿದರು.
ಬಳ್ಳಿಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾವಗಟ್ಟೆ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಯೋಜನೆಯಿಂದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ದುರ್ಗಮ್ಮ ಎಂಬುವರಿಗೆ ವಾತ್ಸಲ್ಯ ಯೋಜನೆಯಡಿ ಕಟ್ಟಿಸಿಕೊಟ್ಟ ಮನೆ ಹಸ್ತಾಂತರಿಸಿ ಮಾತನಾಡಿದರು.
ಪ್ರಸ್ತುತ ಕೌಟುಂಬಿಕ ಸಂಬಂಧಗಳು ಬೇರೆ ಬೇರೆ ಕಾರಣಕ್ಕೆ ಮುರಿದು ಹೋಗುತ್ತಿವೆ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿವೆ. ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಪ್ರೀತಿಯಿಂದ ಆರೈಕೆ ಮಾಡುವುದು ಪ್ರತಿಯೊಬ್ಬ ಮಗನ ಮತ್ತು ಮಗಳ ಪ್ರಥಮ ಕರ್ತವ್ಯ. ಇದನ್ನು ಸಮಾಜದ ಪ್ರತಿಯೊಬ್ಬರೂ ಮನಗಾಣಬೇಕು ಎಂದು ತಿಳಿಸಿದರು.
ಶಿವಳ್ಳಿಯ ಹನುಮಾನಂದ ಆಶ್ರಮದ ಹನುಮಂತಪ್ಪ ಸ್ವಾಮೀಜಿ ಮಾತನಾಡಿ, ವೃದ್ಧಾಪ್ಯದಲ್ಲಿ ಹಿರಿಯರನ್ನು ಗೌರವಿಸಿ ಆರೈಕೆ ಮಾಡಬೇಕು ಎಂದರು. ಬಳ್ಳಿಗಾವಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಮಾತನಾಡಿ, ವಾತ್ಸಲ್ಯ ಯೋಜನೆ ಅತ್ಯಂತ ಪ್ರಶಂಸನೀಯ ಕಾರ್ಯಕ್ರಮವಾಗಿದ್ದು ಬಡ ಕುಟುಂಬದವರು ಇದರ ಪ್ರಯೋಜನ ಪಡೆಯಬೇಕು ಎಂದರು.
ತೊಗರ್ಸಿ ವಲಯ ಮೇಲ್ವಿಚಾರಕ ಚವೀಶ್ ಜೈನ್, ತಾಲೂಕು ಯೋಜನಾಧಿಕಾರಿ ನಂಜುಂಡಿ, ಕರ್ನಾಟಕ ರಾಜ್ಯ ಭೋವಿ ನಿಗಮದ ಮಾಜಿ ನಿರ್ದೇಶಕ ಸಣ್ಣ ಹನುಮಂತಪ್ಪ, ಬಳ್ಳಿಗಾವಿ ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಪ್ಪ, ಶಿಕ್ಷಕ ಕೃಷ್ಣಪ್ಪ, ತಾಳಗುಂದ ಗ್ರಾಪಂ ಮಾಜಿ ಉಪಾಧ್ಯಕ್ಷ ತೋಟಪ್ಪ, ಪ್ರಗತಿಪರ ರೈತ ದುರ್ಗಪ್ಪ, ಪ್ರಮುಖರಾದ ಗಣಪತಿ, ಜ್ಯೋತಿ, ಅಮಿತಾ, ಮೋಹನ್‌ರಾಜ್ ಇತರರಿದ್ದರು.