- ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಸಂಯೋಜಕರಾಗಿ ನೇಮಕ
- ಭಾರತ ಜೋಡೋ ಯುವ ಸಂಘ ರಚನೆ ಸೇರಿ ರಾಜ್ಯದ 11 ಜಿಲ್ಲೆಗಳ ಜವಾಬ್ದಾರಿ
- ವಿದ್ಯಾರ್ಥಿ ಸಂಘಟನೆ, ಎನ್‌ಎಸ್‌ಯುಐ, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಕೆಲಸ
ಶಿವಮೊಗ್ಗ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(Karnataka Region Youth Congress Committee) ಸಂಯೋಜಕರಾಗಿ ಸಿ.ಜಿ.ಮಧುಸೂದನ್ ಅವರನ್ನು ನೇಮಕ ಮಾಡಿದ್ದು, ಭಾರತ ಜೋಡೋ ಯುವ ಸಂಘ ರಚನೆ, ಯುವಕರ ನೋಂದಣಿ ಹಾಗೂ ಸಂಘಟನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಸೇರಿ ರಾಜ್ಯದ 11 ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ.
ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ನಿರ್ದೇಶನದಂತೆ ಹಾಗೂ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ನಿಗಮ್ ಭಂಡಾರಿ(Karnataka Incharge Nigam Bhandari) ಅವರ ಅನುಮೋದನೆಯೊಂದಿಗೆ ಸಂಯೋಜಕರ ನೇಮಕ ಮಾಡಲಾಗಿದೆ.
ಮಧುಸೂದನ್ ಅವರಿಗೆ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಧಾರವಾಡ ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿತ್ರದುರ್ಗ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. 2010ನೇ ಸಾಲಿನಿಂದ ವಿದ್ಯಾರ್ಥಿ ಸಂಘಟನೆ, ಎನ್‌ಎಸ್‌ಯುಐ, ಶಿವಮೊಗ್ಗ ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಮಧುಸೂದನ್ ಕೆಲಸ ನಿರ್ವಹಿಸಿದ್ದಾರೆ.