ರಿಪ್ಪನ್‌ಪೇಟೆ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಅಡಕೆ ಎಲೆಚುಕ್ಕೆ ರೋಗ ನಿಯಂತ್ರಣ ಕಾರ್ಯಾಗಾರದಲ್ಲಿ ರೋಗ ನಿಯಂತ್ರಣ ಮಾಹಿತಿ ಪತ್ರವನ್ನು ಕರಿಬಸವ ನಾಯ್ಕ, ಧರ್ಮೇಂದ್ರ, ಗಿರೀಶ್ ಮತ್ತಿತರರು ಬಿಡುಗಡೆಗೊಳಿಸಿದರು. 
ಶಿವಮೊಗ್ಗ

ಎಲೆಚುಕ್ಕೆ ರೋಗದಿಂದ ರೈತರಿಗೆ ನಷ್ಟ | workshop

ರಿಪ್ಪನ್‌ಪೇಟೆ: ಇತ್ತೀಚೆಗೆ ಮಲೆನಾಡು ಭಾಗಗಳಲ್ಲಿ ಎಲೆಚುಕ್ಕೆ ರೋಗ ಬಾಧಿಸುತ್ತಿದ್ದು ಅಡಕೆ ಬೆಳೆಗಾರರನ್ನು ನಷ್ಟಕ್ಕೆ ನೂಕಿದೆ. ರೈತರು ತೋಟದ ಅಡಕೆ ಗಿಡ, ಮರಗಳನ್ನು ಪ್ರತಿದಿನ ಪರೀಕ್ಷಿಸಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕರಿಬಸವ ನಾಯ್ಕ ಹೇಳಿದರು.
ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಅಡಕೆ ಬೆಳೆಯಲ್ಲಿ ವ್ಯಾಪಿಸುತ್ತಿರುವ ಎಲೆಚುಕ್ಕೆ ರೋಗ ನಿಯಂತ್ರಣ ಹಾಗೂ ನಿರ್ವಹಣೆ ಬಗ್ಗೆ ಜಿಲ್ಲಾ ಪಂಚಾಯಿತಿ ಹಾಗು ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಂದು ಬಣ್ಣದ ಚುಕ್ಕೆಗಳು ಕಂಡುಬಂದಾಗ ಸೂಕ್ತ ನಿರ್ವಹಣೆ ಮಾಡಬೇಕು. ಇಲಾಖೆಯ ತಜ್ಞರ ಮಾರ್ಗದರ್ಶನದಲ್ಲಿ ಕಾಲಕಾಲಕ್ಕೆ ಶಿಫಾರಸುಗೊಂಡ ಔಷಧಗಳನ್ನು ಸಿಂಪಡಿಸುವುದು, ಬಸಿಗಾಲುವೆ ನಿರ್ಮಾಣ ಹಾಗೂ ರೋಗಬಾಧಿತ ಗರಿಗಳನ್ನು ತೆಗೆದು ನಾಶಪಡಿಸಬೇಕು. ಜತೆಗೆ ಮಣ್ಣು ಪರೀಕ್ಷೆ ಮಾಡಿಸಿ ಕೊರತೆಯಿರುವ ಪೋಷಕಾಂಶಗಳನ್ನು ನೀಡಿ ಆರೋಗ್ಯ ವೃದ್ಧಿಸಬೇಕು. ಇಂತಹ ಕ್ರಮಗಳಿಂದ ರೋಗವನ್ನು ಹತೋಟಿಗೆ ತರಬಹುದು ಎಂದರು.
ಧರ್ಮೇಂದ್ರ, ಗಿರೀಶ್, ಟಿ.ಆರ್.ಕೃಷ್ಣಪ್ಪ, ನಾಗಪ್ಪ, ಇಲಾಖೆಯ ಚಂದ್ರಶೇಖರ್, ಪಿಡಿಒ ನಾಗರಾಜ್, ನೇಮಣ್ಣ ಇತರರಿದ್ದರು.