ಸೊರಬದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ವಕೀಲ ಎಂ.ಕೆ.ಯೋಗೇಶ್ ಅಧಿಕಾರ ಸ್ವೀಕರಿಸಿದರು. ಡಾ. ಬಿ.ಎಸ್.ನಾಗಪ್ರಕಾಶ್, ಡಾ. ಎಂ.ಕೆ.ಭಟ್, ಭಾರತಿ ಹನುಮಂತಪ್ಪ ಮತ್ತಿತರರಿದ್ದರು. 
ಶಿವಮೊಗ್ಗ

ಲಯನ್ಸ್ ಸೇವಾ ಕಾರ್ಯ ಶ್ಲಾಘನೀಯ

ಸೋಮಶೇಖರ ಎನ್
ಸೊರಬ: ಮನುಷ್ಯ ಸೇವಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಲಯನ್ಸ್ ಸಂಸ್ಥೆಯು ಮುಖ್ಯ ಧ್ಯೇಯ ಸಹ ಸೇವೆಯೇ ಆಗಿದೆ ಎಂದು ಲಯನ್ಸ್ ಕ್ಲಬ್ ದಾವಣಗೆರೆ ಜಿಲ್ಲಾ ಮಾಜಿ ಗವರ್ನರ್ ಡಾ. ಬಿ.ಎಸ್.ನಾಗಪ್ರಕಾಶ್ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಸೊರಬದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಲಯನ್ ಸಂಸ್ಥೆಯು ಮಾದರಿಯಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಸಮಾಜಕ್ಕೆ ಪೂರಕವಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಲಯನ್ ಕ್ಲಬ್ ಸೊರಬದ ನೂತನ ಅಧ್ಯಕ್ಷ ಎಂ.ಕೆ.ಯೋಗೇಶ್ ಮಾತನಾಡಿ, ಲಯನ್ಸ್ ಸಂಸ್ಥೆ ಜಾತಿ, ಮತ, ಧರ್ಮ, ಅಂತಸ್ತುಗಳ ಭೇದವಿಲ್ಲದೆ ಸೇವೆಯೇ ಪರಮಧ್ಯೇಯವನ್ನಾಗಿ ಹೊಂದಿದೆ. ಎಲ್ಲರ ಸಹಕಾರದಿಂದ ಸಂಸ್ಥೆ ಮುನ್ನೆಡಸಲಾಗುವುದು ಎಂದರು.
ಲಯನ್ ಸಂಸ್ಥೆ ಜಿಲ್ಲಾ ಮಾಜಿ ಗವರ್ನರ್ ಡಾ. ಎಂ.ಕೆ.ಭಟ್ ಮಾತನಾಡಿ, ಲಯನ್ ಸಂಸ್ಥೆ ನಿರಂತರವಾಗಿ ಸೇವಾಕಾರ್ಯಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯಿಂದ ಹೋಲಿಗೆ ಯಂತ್ರ ವಿತರಿಸಲಾಯಿತು. ಲಯನ್ಸ್ ನಿರ್ಗಮಿತ ಅಧ್ಯಕ್ಷೆ ಭಾರತಿ ಹನುಮಂತಪ್ಪ, ನೂತನ ಕಾರ್ಯದರ್ಶಿ ಕೆ.ಮೋಹನ್‌ದಾಸ್, ಖಜಾಂಚಿ ಸುಧಾಕರ್ ನಾಯ್ಕ, ಸುಬ್ರಹ್ಮಣ್ಯ ಗುಡಿಗಾರ್, ಶಂಕರ್ ಬಿರದಾರ್, ಅಶ್ವಿನಿಕುಮಾರ್, ರಘುನಾಥ, ಸವಿತಾ ಇತರರಿದ್ದರು.