ಸೊರಬದ ಕಾನುಕೇರಿ ಮಠದಲ್ಲಿ ಹಮ್ಮಿಕೊಂಡಿದ್ದ ಚನ್ನಬಸಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀ ಮಹಾಂತ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿದರು. ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು. 
ಶಿವಮೊಗ್ಗ

ಸೇವಾ ಕಾರ್ಯಗಳಿಂದ ಬದುಕು ಸಾರ್ಥಕ

ಸೋಮಶೇಖರ ಎನ್
ಸೊರಬ: ಜೀವಿತ ಅವಧಿಯಲ್ಲಿ ನಾವು ಮಾಡುವ ಸೇವೆಯು ಬದುಕನ್ನು ಸಾರ್ಥಕಗೊಳಿಸುತ್ತದೆ. ದಾನ, ಧರ್ಮ ಮತ್ತು ಪರೋಪಕಾರ ಗುಣ ಎಲ್ಲರಲ್ಲಿಯೂ ಇರಬೇಕು ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ಚನ್ನಬಸಪ್ಪ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಾರ್ಥಕ ಬದುಕು ರೂಪಿಸಿಕೊಂಡಿದ್ದ ಗುತ್ತಿ ಚನ್ನಬಸಪ್ಪ ಇತರರಿಗೆ ಮಾದರಿ ಎಂದು ತಿಳಿಸಿದರು.
ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಭೌತಿಕ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿ ಕೆಲವರು ಬದುಕುತ್ತಾರೆ. ಅಂತಹ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿ ಬದುಕಿದವರು ಗುತ್ತಿ ಚನ್ನಬಸಪ್ಪ ಎಂದರು.
ತೊಗರ್ಸಿ ಕ್ಯಾಸನೂರು ಮಠದ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಶ್ರೀ ಮಹಾಂತ ದೇಶೀಕೇಂದ್ರ ಸ್ವಾಮೀಜಿ, ಹಿರೇಮಾಗಡಿ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಮೂಡಿ-ತುರಬಿಗುಡ್ಡದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹಾನಗಲ್ ಕ್ಯಾಸನೂರು ವಿಜಯಕುಮಾರ ದೇಶಿಕರು, ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ಡಾ. ಜ್ಞಾನೇಶ್, ಡಾ. ನಾಗರಾಜ್, ರಾಜಶೇಖರ, ನಾಗರಾಜ್ ಗುತ್ತಿ, ಚಂದ್ರಶೇಖರ್ ನಿಜಗುಣ ಇತರರಿದ್ದರು.