ಆನಂದಪುರ ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಡಾ. ಆರ್.ಸಿ.ಜಗದೀಶ್, ಡಾ. ಎಸ್.ಶ್ರೀಧರ, ಡಾ. ಪ್ರದೀಪ್ ಇತರರಿದ್ದರು. 
ಶಿವಮೊಗ್ಗ

ನಡೆ-ನುಡಿ ಒಂದೇ ಆಗಿರಲಿ | Basava jayanthi

ಶಿವಕುಮಾರ ಎಸ್.ಪಿ.
ಆನಂದಪುರ: ನಮ್ಮ ನಡೆ-ನುಡಿ ಹೇಗಿರಬೇಕು ಎಂದು ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣ ವಿಶ್ವ ಕಂಡ ಮಹನೀಯರಲ್ಲಿ ಒಬ್ಬರು ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.
ಸೋಮವಾರ ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಡೆ ಮತ್ತು ನುಡಿ ಒಂದೇ ರೀತಿ ಇರಬೇಕು. ಕಾಯಕದ ಮೂಲಕ ಕೈಲಾಸ ಕಾಣಬೇಕು ಎಂಬ ಬಸವಣ್ಣವರ ಸಂದೇಶ ಇಂದಿಗೂ ಪ್ರಸ್ತುತ ಎಂದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಎಸ್.ನಾರಾಯಣ ಮಾವರಕರ್ ಮಾತನಾಡಿ ಬಸವಣ್ಣ ಕೇವಲ ಧಾರ್ಮಿಕ ನಾಯಕರಲ್ಲ, ಕ್ರಾಂತಿಕಾರಿ ಚಿಂತಕ. ಅವರ ಸಂದೇಶದಂತೆ ಸತ್ಯವನ್ನು ಪಾಲಿಸೋಣ, ಶ್ರಮವನ್ನು ಗೌರವಿಸೋಣ ಎಂದು ಹೇಳಿದರು.
ವಿವಿಯ ಕುಲಸಚಿವ ಶಾಮರಾವ್ ಜಹಾಗೀರದಾರ್, ಸಂಶೋಧನಾ ನಿರ್ದೇಶಕ ಡಾ. ಎಸ್.ಶ್ರೀಧರ, ಸಹ ಸಂಸೋಧನಾ ನಿರ್ದೇಶಕ ಡಾ. ಎಸ್.ಪ್ರದೀಪ್, ಉಪನ್ಯಾಸಕರಾದ ಡಾ. ಎಂ.ರವಿಕುಮಾರ್, ಎ.ಎಂ.ಅವಿನಾಶ್ ಇತರರಿದ್ದರು.