ಶಿವಮೊಗ್ಗದಲ್ಲಿ ಎಬಿವಿಪಿಯಿಂದ ಏರ್ಪಡಿಸಿದ್ದ ಶಿವಮೊಗ್ಗ ಮಹಾನಗರ ಸಮ್ಮೇಳನವನ್ನು ಲೋಕೇಶ್ವರ್ ರಾವ್ ಕಾಳೆ ಉದ್ಘಾಟಿಸಿದರು. ನಿಂಜನ್, ರಂಜಿತಾ, ನಂದನ್ ಇದ್ದರು. 
ಶಿವಮೊಗ್ಗ

ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರಜ್ಞಾವಂತ ವಿದ್ಯಾರ್ಥಿ ಶಕ್ತಿ ಪಾಲ್ಗೊಳ್ಳಲಿ I nation making students

ಪ್ರಮುಖ ಮುಖ್ಯಾಂಶಗಳು

  • ಉತ್ತಮ ನಾಗರಿಕರಾಗಲು ಒಳ್ಳೆಯ ಚಾರಿತ್ರೃ ಅವಶ್ಯ
  • ಆರ್‌ಎಸ್‌ಎಸ್ ನಗರ ಸಂಘಚಾಲಕ ಲೋಕೇಶ್ವರ್ ರಾವ್ ಆಶಯ
  • ಎಬಿವಿಪಿಯಿಂದ ಮಹಾನಗರ ಸಮ್ಮೇಳನ
ಶಿವಮೊಗ್ಗ:

ಪ್ರಜ್ಞಾವಂತ ವಿದ್ಯಾರ್ಥಿ (student) ಶಕ್ತಿ ದೇಶಕ್ಕೆ (nation) ಅವಶ್ಯವಿದೆ. ಜವಾಬ್ದಾರಿಯುತ ನಾಗರಿಕನಾಗಿ ಸಾಮಾನ್ಯ ಪರಿಜ್ಞಾನ ಹೊಂದಲು ಎಬಿವಿಪಿಯಂತಹ (abvp) ಸಂಘಟನೆಗಳು ಸಹಕಾರಿಯಾಗುತ್ತವೆ ಎಂದು ಆರ್‌ಎಸ್‌ಎಸ್ ನಗರ ಸಂಘಚಾಲಕ ಲೋಕೇಶ್ವರ್ ರಾವ್ ಕಾಳೆ ಅಭಿಪ್ರಾಯಪಟ್ಟರು.

ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್)ಯಿಂದ ಬುಧವಾರ ಏರ್ಪಡಿಸಿದ್ದ ಒಂದು ದಿನದ ಮಹಾನಗರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎಬಿವಿಪಿ ಉತ್ತಮ ವೇದಿಕೆ ಎಂದರು.
ವಿದ್ಯಾರ್ಥಿಯು ಉತ್ತಮ ನಾಗರಿಕನಾಗಲು ಒಳ್ಳೆಯ ಚಾರಿತ್ರೃವೂ ಅವಶ್ಯ. ವಿದ್ಯಾರ್ಥಿ ಜೀವನವು ಭವಿಷ್ಯವನ್ನು ರೂಪಿಸಿಕೊಳ್ಳುವ ಪ್ರಮುಖ ಹಂತ. ಈ ಅವಧಿಯಲ್ಲಿ ಉತ್ತಮ ಸಂಸ್ಕಾರ, ಶಿಸ್ತು, ನಾಯಕತ್ವ ಗುಣ ಹಾಗೂ ದೇಶದ ಬಗ್ಗೆ ಜವಾಬ್ದಾರಿ ಬೆಳೆಸಿಕೊಳ್ಳುವುದು ಅಗತ್ಯ. ಪ್ರಜ್ಞಾವಂತ ವಿದ್ಯಾರ್ಥಿ ಶಕ್ತಿ ಬೆಳೆಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎಬಿವಿಪಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಸಂಘಟನೆಯ ಕಾರ್ಯಕರ್ತರು ನಿಸ್ವಾರ್ಥ ಹಾಗೂ ನಿಸ್ಪಹ ಸೇವೆಗಳಿಂದ ದೇಶದ ಉನ್ನತ ಸ್ಥಾನಕ್ಕೇರಿದ ಉದಾಹರಣೆಗಳನ್ನು ನಾವು ನೋಡಬಹುದು ಎಂದು ಹೇಳಿದರು.
ನಾವು ಸಾಗುವ ದಾರಿ ಶಾರ್ಟ್‌ಕಟ್ ಆಗಿರಬಾರದು, ಸುದೀರ್ಘವೂ ಆಗಿರಬಾರದು. ಕಡಿಮೆ ಸಮಯದಲ್ಲಿ ಅಡೆತಡೆ ಇಲ್ಲದೆ ಸರಿಯಾದ ದಾರಿಯಲ್ಲೇ ಸಾಗುವುದನ್ನು ಎಬಿವಿಪಿ ಕಲಿಸುತ್ತದೆ. ನಮ್ಮ ದೇಶ ಸಮೃದ್ಧಿ -ಶಾಂತಿಯಿಂದ ನೆಲೆಸಲು ಇಂತಹ ಸಂಘಟನೆಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಎಬಿವಿಪಿ ಪ್ರಮುಖರಾದ ನಂದನ್, ನಿರಂಜನ್, ರಂಜಿತಾ ಉಪಸ್ಥಿತರಿದ್ದರು. ಶಿವಮೊಗ್ಗ ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಭವಿಷ್ಯದ ಕುರಿತ ಚಿಂತನೆ

ಯಾವುದೇ ದೊಡ್ಡ ನಿರ್ಧಾರದ ಹಿಂದೆ ಸಾಕಷ್ಟು ಚಿಂತನ-ಮಂಥನ ಹಾಗೂ ದೂರದೃಷ್ಟಿ ಅಡಗಿರುತ್ತದೆ. 1949ರಲ್ಲಿ ಎಬಿವಿಪಿ ಆರಂಭವಾಗುವ ಹಿಂದೆಯೂ ಇಂತಹ ಹಲವು ವಿಚಾರಗಳು ಮತ್ತು ದೇಶದ ಭವಿಷ್ಯದ ಕುರಿತ ಚಿಂತನೆಗಳಿದ್ದವು ಎಂದು ಲೋಕೇಶ್ವರ್ ರಾವ್ ಕಾಳೆ ಹೇಳಿದರು. ಎಬಿವಿಪಿ ಸಂಘಟನೆಯು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಜತೆಗೆ ಅವರ ಮುಂದಿನ ಜೀವನಕ್ಕೆ ಅಗತ್ಯ ನಾಯಕತ್ವ ಮತ್ತು ವ್ಯಕ್ತಿತ್ವ ರೂಪಿಸುವ ವೇದಿಕೆಯಾಗಿದೆ. ಪಿಯುಸಿ, ಪದವಿ, ಇಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣದ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ದಿಕ್ಕು ತೋರಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದು ತಿಳಿಸಿದರು. ಇಂದಿನ ವಿದ್ಯಾರ್ಥಿಗಳು ಸ್ಥಳೀಯ ಅಥವಾ ವೈಯಕ್ತಿಕ ವಿಚಾರಗಳಿಗೆ ಸೀಮಿತವಾಗದೆ, ದೇಶದ ಹಾಗೂ ಜಗತ್ತಿನ ಬೆಳವಣಿಗೆಗಳ ಬಗ್ಗೆ ವಿಶಾಲ ದೃಷ್ಟಿಕೋನ ಹೊಂದಬೇಕು. ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಘಟನೆಗಳನ್ನು ಅರ್ಥ ಮಾಡಿಕೊಂಡು, ಅವುಗಳ ಪರಿಣಾಮಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘ ಸ್ಥಾನದಲ್ಲಿ ಪ್ರತಿದಿನ ಒಂದು ತಾಸು ನಡೆಯುವ ಚಟುವಟಿಕೆ ದೈಹಿಕ ಕಸರತ್ತಿಗೆ ಮಾತ್ರ ಸೀಮಿತವಾಗಿಲ್ಲ. ವ್ಯಕ್ತಿಯ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅಗತ್ಯ ಸಂಸ್ಕಾರ ಮತ್ತು ಶಿಕ್ಷಣ ನೀಡುವ ಪ್ರಕ್ರಿಯೆ ಎಂದು ವಿವರಿಸಿದರು.
"

ಇಂದು ದೇಶವು ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನ ಬಲಪಡಿಸಿಕೊಂಡಿದೆ. ಆದರೆ 15-20 ವರ್ಷಗಳ ಹಿಂದೆ ಇದೇ ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೆ ಯೋಗ್ಯ ರಾಷ್ಟ್ರವೆಂದು ಹೇಳುವ ಪರಿಸ್ಥಿತಿಯೇ ಇರಲಿಲ್ಲ. ದೇಶದ ಪ್ರಗತಿಯೊಂದಿಗೆ ವಿದ್ಯಾರ್ಥಿಗಳಲ್ಲೂ ರಾಷ್ಟ್ರೀಯ ಚಿಂತನೆ ಮತ್ತು ಜವಾಬ್ದಾರಿಯ ಭಾವನೆ ಬೆಳೆಸುವುದು ಅಗತ್ಯ.

— ಲೋಕೇಶ್ವರ್ ರಾವ್ ಕಾಳೆ ಆರ್‌ಎಸ್‌ಎಸ್ ಶಿವಮೊಗ್ಗ ನಗರ ಸಂಘಚಾಲಕ