ಸೊರಬ ತಾಲೂಕಿನ ಕಾಸರಗುಪ್ಪೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಸ್​.ಮಧು ಬಂಗಾರಪ್ಪ ಶಂಕುಸ್ಥಾಪನೆ ನೆರವೇರಿಸಿದರು.  
ಶಿವಮೊಗ್ಗ

ಗ್ಯಾರಂಟಿ ವಿರೋಧಿಗಳಿಗೆ ಲಾನುಭವಿಗಳೇ ಉತ್ತರಿಸಲಿ

ಪ್ರಮುಖ ಮುಖ್ಯಾಂಶಗಳು

  • ಹೊಸಬಾಳೆ ಗ್ರಾಮದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ
  • ಸಚಿವ ಎಸ್​.ಮಧು ಬಂಗಾರಪ್ಪ ಭರವಸೆ
  • ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ
ಸೊರಬ: ಸರ್ಕಾರದಿಂದ ದೊರೆಯುವ ಅನುದಾನದಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ನಂತರ ಊರೊಳಗಿನ ರಸ್ತೆ ಮತ್ತು ದೇವಸ್ಥಾನಗಳಿಗೆ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಹೊಸಬಾಳೆ ಗ್ರಾಮದಲ್ಲಿ ಭಾನುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತವನಂದಿ, ಜಡೆ ಹೊಸೂರು, ಜಿಲ್ಲಾ ಮುಖ್ಯರಸ್ತೆಯಿಂದ ಸೂರಣಗಿ, ತಲಗುಂದ ಕ್ರಾಸ್​ನಿಂದ ಹೊಸೂರು ಗ್ರಾಮಕ್ಕೆ ಹೋಗುವ, ಹರೀಶಿ ದ್ಯಾವಾಸ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರುವ ರಸ್ತೆಗಳ ಅಭಿವೃದ್ಧಿಗೆ 4.8 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಉದ್ರಿ ಗ್ರಾಮದಿಂದ ಗುಡುಗಿನಕೊಪ್ಪ ಗಡಿ ಭಾಗದವರೆಗೆ, ಮೂಡದೀವಳಿಗೆ ಕ್ರಾಸ್​ನಿಂದ ಸಾಂಬಾಪುರ ಚನ್ನಪಟ್ಟಣ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಹೊಸಬಾಳೆ ಗ್ರಾಮದಿಂದ ಕೋಡನಕಟ್ಟೆ ಹೋಗುವ ರಸ್ತೆ ಅಭಿವೃದ್ಧಿಗೆ 4.10 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಆರಂಭದಲ್ಲಿ ವಿಪದವರು ಅಪಸ್ವರ ಎತ್ತಿದ್ದರು. ಅವರಿಗೆ ಲಾನುಭವಿಗಳೇ ಸೂಕ್ತ ಉತ್ತರ ನೀಡಬೇಕು. ಗೃಹಲಕ್ಷಿ$್ಮ ಯೋಜನೆ ಅನೇಕ ಬಡವರ ಬದುಕಿಗೆ ಆಸರೆಯಾಗಿದೆ. ಜಾತಿ, ಮತ, ಧರ್ಮಗಳ ಆಧಾರದಲ್ಲಿ ಯೋಜನೆಗಳನ್ನು ನೀಡದೆ ಸಮಾಜದ ಪ್ರತಿಯೊಬ್ಬರಿಗೂ ಪ್ರಯೋಜನ ದೊರೆಯುತ್ತಿದೆ ಎಂದರು.
ಹೊಸಬಾಳೆ ಮುಖ್ಯರಸ್ತೆಯಿಂದ ಕಾಸರಗುಪ್ಪೆ ಹೋಗುವ 30 ಲ ರೂ. ವೆಚ್ಚದ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಗ್ರಾಮಸ್ಥರು ಗ್ರಾಮದ ಬಸ್​ ನಿಲ್ದಾಣದಿಂದ ಕೆರೆ ಏರಿ ಮೇಲೆ ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು. ಬೀದಿ ದೀಪಗಳ ಅಳವಡಿಕೆಗಾಗಿ ಮೆಸ್ಕಾಂ ಎಇಇ ಸತ್ಯಪ್ರಕಾಶ್​ ಅವರಿಗೆ ಸೂಚಿಸಿದರು.
ಟಿಎಪಿಸಿಎಂಸಿ ಅಧ್ಯ ಕೆ.ವಿ.ಗೌಡ, ತಾಪಂ ಮಾಜಿ ಅಧ್ಯ ಗಣಪತಿ ಹುಲ್ತಿಕೊಪ್ಪ, ಮಾಜಿ ಸದಸ್ಯ ನಾಗರಾಜ ಚಿಕ್ಕಸವಿ, ಬಗರ್​ಹುಕುಂ ಸಮಿತಿ ಅಧ್ಯ ಎಂ.ಡಿ.ಶೇಖರ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ಅಣ್ಣಪ್ಪ ಹಾಲಟ್ಟ, ಬೂತ್​ ಸಮಿತಿ ಅಧ್ಯ ಗಣಪತಿ ಕಾಸರಗುಪ್ಪೆ, ಡಿಡಿಪಿಐ ಮಂಜುನಾಥ್​, ತಹಸೀಲ್ದಾರ್​ ಕೆ.ಪುರಂದರ, ತಾಪಂ ಇಒ ಕೆ.ಜಿ.ಶಶಿಧರ್​ ಇತರರಿದ್ದರು.
ಈ ಬಾರಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಲಿತಾಂಶ ದೊರೆತಿದೆ. ಶೇ.94ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 3,800 ಕೋಟಿ ರೂ. ವೆಚ್ಚದಲ್ಲಿ 1000 ಕರ್ನಾಟಕ ಪಬ್ಲಿಕ್​ ಶಾಲೆಗಳ ಸ್ಥಾಪನೆಗೆ ಜೂ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮಕ್ಕಳಿಗೆ ಉತ್ತಮ ಶಿಣ ಹಾಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪಾಲಕರು ಮತ್ತು ಶಾಲಾಭಿವೃದ್ಧಿ ಸಮಿತಿ ಈ ಬಗ್ಗೆ ನಿಗಾವಹಿಸಬೇಕು.
> ಎಸ್​.ಮಧು ಬಂಗಾರಪ್ಪ, ಸಚಿವ