ಸಾಗರ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಬಾಲಚಂದ್ರ ಜೋಯಿಸ್, ತಿಮ್ಮಣ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ಶೇಷಗಿರಿ ಭಟ್, ರಾಜೇಂದ್ರಪ್ರಸಾದ್ ಭಟ್ ಇತರರಿದ್ದರು. 
ಶಿವಮೊಗ್ಗ

ಹಿರಿಯರ ಅನುಭವ ಮಾರ್ಗಸೂಚಿಯಾಗಲಿ | Honor programme

ಶಿವಕುಮಾರ ಎಸ್.ಪಿ.
ಸಾಗರ: ಎಲ್ಲರ ಕ್ಷೇಮ ನಮ್ಮ ಉದ್ದೇಶವಾಗಬೇಕು. ಅಂತಹ ಜೀವನವನ್ನು ನಡೆಸಲು ಮಾರ್ಗದರ್ಶನವಾಗಿ ಹಿರಿತನದ ಅನುಭವಗಳನ್ನು ತಿಳಿಯುವ ಮನಸ್ಸಿರಬೇಕು ಎಂದು ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ಅಧ್ಯಕ್ಷ ವೇ. ರಾಜೇಂದ್ರಪ್ರಸಾದ್ ಭಟ್ ಹೇಳಿದರು.
ಸಾಗರದ ಶ್ರೀ ರಾಘವೇಶ್ವರ ಭವನದಲ್ಲಿ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಏರ್ಪಡಿಸಿದ್ದ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಹಿರಿಯರ ಅನುಭವಗಳನ್ನು ಆಲಿಸುವ ಕ್ರಮ ಮರೆತು ಹೋಗುತ್ತಿದೆ. ಇದರ ಪರಿಣಾಮ ಜೀವನ ಸಂಕುಚಿತವಾಗುತ್ತಿದೆ. ನಮ್ಮ ಸುತ್ತಲೂ ನೆಮ್ಮದಿಯ ವಾತಾವರಣ ಇದ್ದರೆ ಮಾತ್ರ ನಮ್ಮ ಬದುಕಿಗೂ ಅರ್ಥ. ಹಾಗಾಗಿ ಲೋಕಕಲ್ಯಾಣದ ಕೆಲಸಗಳು ನಮ್ಮದಾಗಿರಬೇಕು ಎಂದರು.
ಇದಕ್ಕೂ ಮುನ್ನ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಪರಿಷತ್ತಿನ ವಾರ್ಷಿಕ ಸಭೆ ನಡೆಯಿತು. ಬಾಲಚಂದ್ರ ಜೋಯಿಸ್, ತಿಮ್ಮಣ್ಣ ಭಟ್ ಮುಂಗರವಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಿವಮೊಗ್ಗ ನಟೇಶ್ ಅವರಿಂದ ಮಂಕುತಿಮ್ಮನ ಕಗ್ಗ ಉಪನ್ಯಾಸ ನಡೆಯಿತು. ಪರಿಷತ್ ಕಾರ್ಯದರ್ಶಿ ಸಮರ್ಥ ಭಟ್, ಸಿಗಂದೂರು ಪ್ರಧಾನ ಅರ್ಚಕ ಶೇಷಗಿರಿ ಭಟ್, ನಾಗರಾಜ್ ಭಟ್, ರವೀಂದ್ರ ಶರ್ಮ, ಪರಮೇಶ್ವರ ಭಟ್, ಪ್ರಶಾಂತ ಭಟ್, ಅನಿಲ್ ಹೊಳ್ಳ, ಶ್ರೀರಾಮ ಭಟ್ ಇತರರಿದ್ದರು.