ಸೊರಬ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು. ಡಾ. ಕೆ.ಶಿವರಾಯಪ್ಪ, ಡಾ. ನೇತ್ರಾವತಿ ಮಾತನಾಡಿದರು. ರೋವರ್ಸ್ ಘಟಕದ ಕಾವ್ಯಾ, ವಾಣಿಜ್ಯಶಾಸ್ತ್ರದ ಮುಖ್ಯಸ್ಥ ಡಾ. ಮಹಾವೀರ ಜೈನ್,
ಸೊರಬ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಶಿವರಾಯಪ್ಪ ಹೇಳಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಆಯೋಜಿಸಿದ್ದ ಕ್ಯಾನ್ಸರ್ ಅರಿವು, ಪರಿಹಾರ ಮಾರ್ಗೋಪಾಯ ಕುರಿತು ಪ್ರಬಂಧ ರಚನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಬೌದ್ಧಿಕ ಜ್ಞಾನ ವೃದ್ಧಿಸುತ್ತದೆ ಎಂದು ತಿಳಿಸಿದರು.
ಯುವ ರೆಡ್‌ಕ್ರಾಸ್ ಘಟಕದ ಮುಖ್ಯಸ್ಥೆ ಡಾ. ನೇತ್ರಾವತಿ ಮಾತನಾಡಿದರು. ರೋವರ್ಸ್ ಘಟಕದ ಕಾವ್ಯಾ, ವಾಣಿಜ್ಯಶಾಸ್ತ್ರದ ಮುಖ್ಯಸ್ಥ ಡಾ. ಮಹಾವೀರ ಜೈನ್, ರವಿ ಕಲ್ಲಂಬಿ, ಮಂಜುನಾಥ್, ಡಾ. ಜಿ.ಆರ್.ಜೋಶಿ, ಲೋಕೇಶಪ್ಪ, ಆಶಾ ಗೌಡರ್, ನೇಂದ್ರಪ್ಪ, ಆರ್.ಈರೇಶ್, ಚೇತನ್, ಡಾ. ವಿಷಕಂಠಮೂರ್ತಿ, ಡಾ. ಯೋಗೀಶ್, ಮಹೇಶ್, ರಾಘವೇಂದ್ರ, ಡಾ. ನೀಲೇಶ್ ಇತರರಿದ್ದರು.