ಸಾಗರದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಟಿಲ್ಲರ್ ವಿತರಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಲೋಕೇಶ್, ಬಿ.ಎಲ್.ಶಿವಪ್ರಕಾಶ್ ಇತರರಿದ್ದರು.
ಸಾಗರ: ರೈತರು ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಕೃಷಿ ಇಲಾಖೆಯಿಂದ ರೈತರಿಗೆ ಟಿಲ್ಲರ್ ವಿತರಿಸಿ ಮಾತನಾಡಿ, ತಾಲೂಕಿನಲ್ಲಿ 12 ರೈತ ಫಲಾನುಭವಿಗಳಿಗೆ 2.25 ಲಕ್ಷ ರೂ. ವೆಚ್ಚದ ಟಿಲ್ಲರ್ ನೀಡಿದ್ದು, 92 ಸಾವಿರ ರೂ. ಸಬ್ಸಿಡಿ ಇರಲಿದೆ. ರೈತರು ಸಾಂಪ್ರದಾಯಿಕ ಕೃಷಿ ಜತೆ ಆಧುನಿಕ ಕೃಷಿಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇಲಾಖೆ ಅಧಿಕಾರಿಗಳು ಕೃಷಿ ಸೌಲಭ್ಯಗಳ ಮಾಹಿತಿಯನ್ನು ರೈತರಿಗೆ ಒದಗಿಸಬೇಕು. ಅನೇಕ ಯಂತ್ರೋಪಕರಣಗಳು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ರೈತರಿಗೆ ಮಾಹಿತಿ ಇಲ್ಲದೆ ಹೋದರೆ ಯೋಜನೆ ವಿಫಲ ಆಗುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕೃಷಿ ಇಲಾಖೆಯ ಲೋಕೇಶ್, ಬಿ.ಎಲ್.ಶಿವಪ್ರಕಾಶ್, ನಂದೀಶ್, ಬಿ.ಆರ್.ವಿನಾಯಕ ರಾವ್ ಇತರರಿದ್ದರು.