ಸಾಗರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಸಾಂಸ್ಕೃತಿಕ ಸ್ಪರ್ಧೆಯನ್ನು ಶಾರದಾ ಬಂಗೇರ ಉದ್ಘಾಟಿಸಿದರು. ಸರಸ್ವತಿ ನಾಗರಾಜ್, ಸುಲೋಚನಾ ಇತರರಿದ್ದರು. 
ಶಿವಮೊಗ್ಗ

ಸ್ವಯಂರಕ್ಷಣೆ ಕೌಶಲ ಕಲಿಕೆ ಅವಶ್ಯ

ಸೋಮಶೇಖರ ಎನ್
ಸಾಗರ: ಮಹಿಳೆಯರು ಸ್ವಯಂರಕ್ಷಣೆ ಕೌಶಲ ಕಲಿಯುವುದು ಅವಶ್ಯ. ಸ್ವಯಂರಕ್ಷಣೆ ಕಲಿತರೆ ಧೈರ್ಯವಾಗಿ ಸಂಕಷ್ಟಗಳನ್ನು ಎದುರಿಸಬಹುದು ಎಂದು ತಾಲೂಕು ಮಹಿಳಾ ಸಂರಕ್ಷಣಾಧಿಕಾರಿ ಶಾರದಾ ಬಂಗೇರಾ ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ಸಾಗರ ಶ್ರೀಗಂಧ ಲಯನ್ಸ್ ಕ್ಲಬ್‌ನಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಪ್ರತಿ ತಾಯಿಯೂ ತನ್ನ ಹೆಣ್ಣುಮಕ್ಕಳ ಚಲನವಲನ ಗಮನಿಸುತ್ತಿರಬೇಕು. ಅವಳ ವರ್ತನೆ ಏರುಪೇರು ಗಮನಿಸಿ ಸೂಕ್ಷ್ಮ ತಿಳಿವಳಿಕೆ ನೀಡಿ ವಿಷಯಗಳ ಅರಿವು ಮೂಡಿಸಬೇಕು. ಅನಗತ್ಯ ಸಂಬಂಧಗಳಿಂದ ಅವರನ್ನು ರಕ್ಷಿಸಬೇಕಿದೆ ಎಂದು ತಿಳಿಸಿದರು.
ಸಾಗರ ಶ್ರೀಗಂಧ ಲಯನ್ಸ್ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮಾತನಾಡಿ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸೂಕ್ತ ಕಾನೂನು ಇದ್ದು, ಸಾಕಷ್ಟು ಮಹಿಳೆಯರಿಗೆ ಅದರ ಅರಿವು ಇರುವುದಿಲ್ಲ. ತಮಗೆ ಆಗಿರುವ ಅನ್ಯಾಯಕ್ಕೆ ಕಾನೂನುಬದ್ಧವಾಗಿ ನ್ಯಾಯ ಪಡೆಯಬೇಕು ಎಂದರು.
ಮಹಿಳಾ ದಿನಾಚರಣೆ ಪ್ರಯುಕ್ತ ಶ್ರೀಗಂಧ ಲಯನ್ಸ್ ಕ್ಲಬ್‌ನಿಂದ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಮೇಜರ್ ನಾಗರಾಜ್, ಕೆ.ಬಿ.ಮಹಾಬಲೇಶ್ವರ, ಎನ್.ಆರ್.ವಿನಯ್‌ಕುಮಾರ್, ಸುಧಾ ಉದಯ, ಸುಲೋಚನಾ, ಮೈತ್ರಿ ಮನೋಜ್, ಸವಿತಾ ಮಹಾಬಲೇಶ್, ಸಹನಾ, ವೀಣಾ, ಮಂಜುಳಾ ಚಂದ್ರಪ್ಪ, ಸೋಯಜಾಕ್ಷಿ, ಸರಸ್ವತಿ, ವಸುಮತಿ ಇತರರಿದ್ದರು.