ಉಡುಪಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಲಕ್ಷ್ಮೀನಾರಾಯಣ ಭಟ್ ಸಂಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು. 
ಶಿವಮೊಗ್ಗ

ಲಕ್ಷ್ಮೀನಾರಾಯಣ ಭಟ್ ಸಂಪಗೆ ಪ್ರಶಸ್ತಿ

ಜಿ. ಗಜೇಂದ್ರ
ಕಾರ್ಗಲ್: ಉಡುಪಿಯ ಯಕ್ಷಗಾನ ಕಲಾರಂಗದ ಪಡಾರು ನರಸಿಂಹಶಾಸ್ತ್ರೀ ಸ್ಮರಣಾರ್ಥ ಯಕ್ಷ ಸಾಧಕರಿಗೆ ನೀಡಲಾಗುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗದಲ್ಲಿ 45 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಕಲಾವಿದ ಭಾರಂಗಿ ಹೋಬಳಿಯ ಲಕ್ಷ್ಮೀನಾರಾಯಣ ಭಟ್ ಸಂಪ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚೆಂಡೆ ವಾದ್ಯದ ಅತಿಥಿ ಕಲಾವಿದರಾಗಿ ಹಲವು ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದು ಈ ಭಾಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಲಕ್ಷ್ಮೀನಾರಾಯಣ ಭಟ್ ಅವರು ಪ್ರಸಂಗಕರ್ತ ಗುಂಡೂ ಸೀತಾರಾಮ ರಾವ್ ಇವರ ಪ್ರೇರಣೆಯಿಂದ ಯಕ್ಷಗಾನ ರಂಗ ಪ್ರವೇಶಿಸಿ ಗೋಡೆ ನಾರಾಯಣ ಹೆಗಡೆ ಅವರಿಂದ ನೃತ್ಯ ಅಭ್ಯಾಸ ಮಾಡಿ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆ ಕಟ್ಟಿ ಎರಡು ವಷರ್ ಕಲಾ ಸೇವೆ ಸಲ್ಲಿಸಿದ್ದಾರೆ. ಸಾಲಿಗ್ರಾಮ ಮೇಳದಲ್ಲಿ ವೇಷಧಾರಿಯಾಗಿ ವೃತ್ತಿ ಮುಂದುವರಿಸಿದರು. ಕ್ರಮೇಣ ಹಿಮ್ಮೇಳ ವಾದನದತ್ತ ಆಕರ್ಷಿತರಾಗಿ ಗುಣವಂತೆ ಗಜಾನನ ಭಂಡಾರಿ ಅವರಲ್ಲಿ ಚೆಂಡೆ ಮದ್ದಳೆ ವಾದ್ಯದ ತರಬೇತಿ ಪಡೆದರು. ಮುಲ್ಕಿ, ಹಿರಿಯಡ್ಕ, ಪಂಚಲಿಂಗ, ಬಚ್ಚಗಾರು, ಪೂರ್ಣಚಂದ್ರ ಮೇಳಗಳು ಸೇರಿ ಹಲವು ಮೇಳಗಳಲ್ಲಿ ನಾಲ್ಕೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.