ಸಾಗರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಮಳೆಯಿಂದಾಗಿ ಧರೆ ಕುಸಿದಿರುವುದು.
ಸಾಗರ: ತಾಲೂಕಿನಲ್ಲಿ ಸುರಿದ ವಿಪರೀತ ಮಳೆಯ ಕಾರಣ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ದಿಬ್ಬದ ಮಣ್ಣು ಕುಸಿದಿದೆ. ಪಕ್ಕದಲ್ಲಿಯೇ ಮಹೇಶ್ ದೇವಾಡಿಗ ಎಂಬುವವರ ಮನೆ ಇದ್ದು, ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಗಾಳಿ ಸಹಿತ ಮಳೆ ಆಗುತ್ತಿರುವ ಕಾರಣಕ್ಕೆ ಧರೆ ಕುಸಿದಿದೆ.
ಈ ಗುಡ್ಡದ ಮೇಲ್ಭಾಗದಲ್ಲಿ ಕೆಳದಿ ಮಾಸೂರು ಎ್&6 ವಿದ್ಯುತ್ ಮಾರ್ಗ ಹಾದು ಹೋಗಿದೆ. ವಿಪರೀತ ಮಳೆ ಜತೆಗೆ ಗಾಳಿ ಇರುವುದರಿಂದ ಗುಡ್ಡದ ಮೇಲಿನ ವಿದ್ಯುತ್ ಕಂಬಗಳು ಮುರಿದು ಬಿದ್ದು ಮಹೇಶ್ ದೇವಾಡಿಗ ಅವರ ಮನೆ ಮೇಲೆ ವಿದ್ಯುತ್ ತಂತಿ ಬೀಳುವ ಸಾಧ್ಯತೆ ಇದೆ. ತಣ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್ ಕಂಬ ಬೀಳದಂತೆ ಸೂಕ್ತ ವ್ಯವಸ್ಥೆ ಒದಗಿಸಲು ರೈತ ಸಂದ ಜಿಲ್ಲಾ ಕಾರ್ಯಾಧ್ಯ ರಮೇಶ್ . ಕೆಳದಿ ಮನವಿ ಮಾಡಿದ್ದಾರೆ.